ಕೋಲ್ಕತ್ತ: ಭಾರತೀಯ ನೌಕಾಪಡೆಯ ಎರಡು ಕ್ಷಿಪಣಿ ನಿರೋಧಕ ಯುದ್ಧನೌಕೆಗಳು ಇಲ್ಲಿನ ಕಿಡ್ಡರ್ಪೋರ್ ಡಾಕ್ನ ಬರ್ತ್ 11 ತಲುಪಿದ್ದು, ‘ನೌಕಾಪಡೆ ವಾರ’ ಆಚರಣೆ ಪ್ರಯುಕ್ತ ನ.30ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರಲಿವೆ.

ಬಂಗಾಳಕೊಲ್ಲಿಯಲ್ಲಿ ನಿಯೋಜಿಸಿರುವ ಐಎನ್ಎಸ್ ಖಂಜರ್ ಮತ್ತು ಐಎನ್ಎಸ್ ಕೋರಾ ಯುದ್ಧ ನೌಕೆಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ಹೂಗ್ಲಿ ನದಿಯ ದಡದಲ್ಲಿರುವ ಮಹಾನಗರಕ್ಕೆ ತರಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗ್ರೇ ಫೆರಾರಿ ಎಂಬ ಅಡ್ಡ ಹೆಸರಿನ ಐಎನ್ಎಸ್ ಖಂಜರ್ 1991ರಲ್ಲಿ ನಿಯೋಜಿಸಲಾದ ಪಿ–25 ವರ್ಗದ ಕ್ಷಿಪಣಿ ನಿರೋಧಕ ಯುದ್ಧನೌಕೆಯಾಗಿದೆ. ಗೂರ್ಖಾ ಯೋಧರು ಬಳಸುತ್ತಿದ್ದ ಸಾಂಪ್ರದಾಯಿಕ ಕತ್ತಿಯಾದ ‘ಕೋರಾ’ದ ಹೆಸರನ್ನು ಇಡಲಾದ ಐಎನ್ಎಸ್ ಕೋರಾ 1998ರಲ್ಲಿ ನಿಯೋಜಿಸಲಾದ ಪಿ–25ಎ ವರ್ಗದ ಯುದ್ಧನೌಕೆಯಾಗಿದೆ.

ಎರಡೂ ಯುದ್ಧನೌಕೆಗಳನ್ನು ಕೋಲ್ಕತ್ತದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ ಲಿಮಿಟೆಡ್ ನಿರ್ಮಿಸಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.