ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವು (ಐಜಿಐಎ) ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, 2024ರಲ್ಲಿ 7.7 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ವರದಿಯಲ್ಲಿ ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯು ವಿಶ್ವದ 20 ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣವು ಅಗ್ರಸ್ಥಾನದಲ್ಲಿದೆ. ಈ ವಿಮಾನ ನಿಲ್ದಾಣದಿಂದ 10.80 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ದುಬೈ ವಿಮಾನ ನಿಲ್ದಾಣದಿಂದ 9.23 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದರೆ, ಇತ್ತ ಮೂರನೇ ಸ್ಥಾನದಲ್ಲಿರುವ ಡಲ್ಲಾಸ್/ಫೋರ್ಟ್ ವರ್ತ್ ವಿಮಾನ ನಿಲ್ದಾಣದಿಂದ 8.78 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಎಸಿಐ ವರದಿಯಲ್ಲಿ ಉಲ್ಲೇಖಿಸಿದೆ.

2024ರಲ್ಲಿ ಜಾಗತಿಕ ಪ್ರಯಾಣಿಕರ ಸಂಖ್ಯೆ ಗರಿಷ್ಠ ಮಟ್ಟ ತಲುಪಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7.78 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2023ರಲ್ಲಿ 10ನೇ ಸ್ಥಾನದಲ್ಲಿದ್ದ ಐಜಿಐಎ ಶ್ರೇಯಾಂಕವು 2024ರಲ್ಲಿ 9ನೇ ಸ್ಥಾನಕ್ಕೆ ಸುಧಾರಿಸಿದೆ.

20 ಜನನಿಬಿಡ ವಿಮಾನ ನಿಲ್ದಾಣಗಳ ಪೈಕಿ ಅಮೆರಿಕದ ಆರು ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ. ಅವುಗಳಲ್ಲಿ ಹೆಚ್ಚಿನವು ದೇಶೀಯ ಸಂಚಾರದಿಂದ ಪ್ರಾಬಲ್ಯ ಹೊಂದಿದ್ದು, ಶೇ 56ರಷ್ಟು ಅಂತರರಾಷ್ಟ್ರೀಯ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಅಗ್ರ 10 ವಿಮಾನ ನಿಲ್ದಾಣಗಳ ಪೈಕಿ ಜಪಾನ್ನ ಹನೆಡಾ (4), ಲಂಡನ್ನ ಹೀಥ್ರೂ (5), ಅಮೆರಿಕದ ಡೆನ್ವರ್ (6), ಟರ್ಕಿಯ ಇಸ್ತಾನ್ಬುಲ್ (7), ಅಮೆರಿಕದ ಚಿಕಾಗೊ (8) ಮತ್ತು ಚೀನಾದ ಶಾಂಘೈ ವಿಮಾನ ನಿಲ್ದಾಣವು 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.