ಬೆಂಗಳೂರು: ಚಂದ್ರಯಾನ–3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ–ಎಲ್1 ನಾಳೆ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ. ಈ ಸಂಬಂಧ ಲೈವ್ ಲಿಂಕ್‌ಗಳನ್ನು ಇಸ್ರೊ ಹಂಚಿಕೊಂಡಿದೆ.
ಎಲ್ಲೆಲ್ಲಿ ವೀಕ್ಷಿಸಬಹುದು:
ಟಿವಿ ಚಾನೆಲ್:
ಡಿಡಿ ನ್ಯಾಷನಲ್
ಇಸ್ರೊ ವೆಬ್‌ಸೈಟ್:
ಇಸ್ರೊ ಫೇಸ್‌ಬುಕ್ ಪೇಜ್:
ಇಸ್ರೊ ಯೂಟ್ಯೂಬ್ ಲಿಂಕ್:
ಆದಿತ್ಯ–ಎಲ್1 ಕುರಿತು ಹೆಚ್ಚಿನ ಮಾಹಿತಿ:
ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ ಬೆಳಿಗ್ಗೆ 11.50 ಕ್ಕೆ ಪಿಎಸ್‌ಎಲ್‌ವಿ–ಸಿ 57 ರಾಕೆಟ್ ಮೂಲಕ ಆದಿತ್ಯ ಎಲ್1 ಉಡಾವಣೆ ನಡೆಯಲಿದೆ. ಇದರಲ್ಲಿ ಸೂರ್ಯನ ಅಧ್ಯಯನ ನಡೆಸಲು ಒಟ್ಟು ಏಳು ಉಪಕರಣಗಳು (ಪೇಲೋಡ್) ಇರಲಿವೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್ ಎಲ್ ಒನ್ ಬಿಂದುವಿನಲ್ಲಿ ಆದಿತ್ಯ ಎಲ್–1 ಅಂತರಿಕ್ಷ ವೀಕ್ಷಣಾಲಯವನ್ನು (ಅಬ್ಸರ್ವೇಟರಿ) ಇರಿಸಲಾಗುವುದು. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ. ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ (ಕೊರೋನಾ) ಅಧ್ಯಯನ ವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ. ಆದಿತ್ಯ ಎಲ್1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ಇಸ್ರೊ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.