ನವದೆಹಲಿ: ‘ಜೈಪುರದ ಶಾಲೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ, 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸಾಯುವ ದಿನದವರೆಗೆ 18 ತಿಂಗಳಿಗೂ ಹೆಚ್ಚು ಕಾಲ ತರಗತಿಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದಳು’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ತನಿಖಾ ವರದಿ ಹೇಳಿದೆ.

ನ.1ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಒಂಬತ್ತು ವರ್ಷದ ಬಾಲಕಿಯ ಸಾವಿನ ಕುರಿತು ತನಿಖೆಗಾಗಿ ರಚಿಸಿದ್ದ ತನಿಖಾ ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ನಂತರ ಸಿಬಿಎಸ್ಇ ನೀರ್ಜಾ ಮೋದಿ ಶಾಲೆಗೆ ಷೋಕಾಸ್ ನೋಟಿಸ್ ನೀಡಿದೆ.

‘ಬಾಲಕಿಯ ಸಹಪಾಠಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಿದ್ದರು. ಶಾಲೆಯು ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ವಿಫಲವಾಗಿತ್ತು. ಈ ಸಮಸ್ಯೆ ಕುರಿತು ಆಕೆಯ ಪೋಷಕರು 2024ರ ಜುಲೈನಲ್ಲಿ ಶಿಕ್ಷಕರ ಗಮನಕ್ಕೆ ತಂದಿದ್ದರು. ತನ್ನ ಜೀವನದ ಕೊನೆಯ 45 ನಿಮಿಷಗಳಲ್ಲಿ ಬಾಲಕಿಯು ಐದು ಬಾರಿ ತರಗತಿ ಶಿಕ್ಷಕರ ಬಳಿಗೆ ಹೋದಾಗಲೂ, ಆಕೆಯ ಸಂಕಷ್ಟಕ್ಕೆ ಸ್ಪಂದಿಸಿ, ಬಗ್ಗೆ ಕ್ರಮ ಕೈಗೊಳ್ಳಲು ಅವರು ವಿಫಲರಾಗಿದ್ದರು’ ಎಂದು ಸಮಿತಿ ಹೇಳಿದೆ.

‘ಪೋಷಕರು ಸಮಿತಿಗೆ ನೀಡಿದ ಹೇಳಿಕೆಗಳ ಪ್ರಕಾರ, ಸಹಪಾಠಿಗಳ ಕಿರುಕುಳ ಮತ್ತು ಕೀಟಲೆಯ ದೂರುಗಳ ಕುರಿತು ಶಾಲೆಯು ಕ್ರಮ ಕೈಗೊಂಡಿಲ್ಲ. ಬಾಲಕಿಯು ಎದುರಿಸುತ್ತಿದ್ದ ಕಿರುಕುಳ ಮತ್ತು ಆಘಾತದ ಬಗ್ಗೆ ತರಗತಿ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗೆ ಚೆನ್ನಾಗಿ ತಿಳಿದಿತ್ತು’ ಎಂದು ಮಂಡಳಿಯು ಷೋಕಾಸ್ ನೋಟಿಸ್ನಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.