ಲಖನೌ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನವ ವಿವಾಹಿತ ದಂಪತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮೊಹಮ್ಮದ್ ಸಾಜಿದ್ (22), ಶಾಹಿದಾ ಅಲಿಯಾಸ್ ಸೂಫಿಯಾ (20) ಎಂದು ಗುರುತಿಸಲಾಗಿದೆ.

ಹೆಚ್ಚುವರಿ ಡಿಸಿಪಿ ಯೋಗೇಶ್ ಕುಮಾರ್ ಅವರ ಪ್ರಕಾರ, ಮೃತ ಮೊಹಮ್ಮದ್ ಸಾಜಿದ್ ಹಾಗೂ ಶಾಹಿದಾ ಅಲಿಯಾಸ್ ಸೂಫಿಯಾ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕಾನ್ಪುರ್ದಲ್ಲೇ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಮೊಹಮ್ಮದ್ ಸಾಜಿದ್ ಆಟೋ ಚಾಲಕನಾಗಿದ್ದ ಎಂದಿದ್ದಾರೆ.

ಇನ್ನು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನವ ವಿವಾಹಿತ ದಂಪತಿ ಮಂಗಳವಾರ ಮಧ್ಯಾಹ್ನ ಮಾರುಕಟ್ಟೆಗೆ ಹೋಗಿ ಖುಷಿಯಿಂದಲೇ ವಾಪಸ್ ಆಗಿದ್ದರು. ತಮ್ಮ ಕೋಣೆಗೆ ಹೋಗುವ ಮೊದಲು ದಂಪತಿ ಕುಟುಂಬಸ್ಥರ ಜತೆ ಫೋನ್ನಲ್ಲಿ ಮಾತನಾಡಿದ್ದಾರೆ. ಇದಾದ ಬಳಿಕ ಸಂಜೆ ಸಾಜಿದ್ ಅವರ ಸಹೋದರಿ ಚಹಾಗಾಗಿ ಕರೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಾಜಿದ್ ಸಹೋದರಿ ಮನೆ ಒಳಗೆ ಹೋಗುತ್ತಿದ್ದಂತೆ ಕೋಣೆ ಒಳಗಿನಿಂದ ಲಾಕ್ ಆಗಿರುವುದು ಗೊತ್ತಾಗಿದೆ. ಆಗ ಸಹೋದರಿ ಎಷ್ಟು ಕೂಗಿದರೂ ದಂಪತಿ ಸ್ಪಂದಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡ ಸಹೋದರಿ ಕಿಟಕಿ ಮೂಲಕ ನೋಡಿದಾಗ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿದ್ದರಂತೆ. ಆ ಕೂಡಲೇ ಸಹೋದರಿ ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಅಕ್ಕ ಪಕ್ಕದವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮನೆಯಲ್ಲಿ ಯಾವುದೇ ಡೇತ್ ನೋಟ್ ಪತ್ತೆಯಾಗಿಲ್ಲ. ಹೀಗಾಗಿ ದಂಪತಿ ಸಾವಿನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
.ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ.ಉತ್ತರ ಪ್ರದೇಶ: ನದಿಯಲ್ಲಿ ತಂದೆಯ ಅಸ್ಥಿ ವಿಸರ್ಜಿಸುವಾಗ ಕೊಚ್ಚಿ ಹೋದ ಮಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.