ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದೇ ಎಎಪಿಯ ಆದ್ಯತೆಯ ಕೆಲಸವಾಗಿರಲಿದೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ವಿಡಿಯೊ ಸಂದೇಶದ ಮೂಲಕ ಮಾತನಾಡಿರುವ ಅವರು, ‘ಯುವ ಜನತೆಗೆ ಉದ್ಯೋಗ ನೀಡುವುದೇ ನಮ್ಮ ಆದ್ಯತೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ತಮ್ಮ ತಂಡ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ತಮ್ಮ ಸರ್ಕಾರದ ದಾಖಲೆಗಳ ಬಗ್ಗೆ ವಿವರಿಸಿ, ‘ಪಂಜಾಬ್ನಲ್ಲಿನ ಎಎಪಿ ಸರ್ಕಾರವು ಎರಡು ವರ್ಷಗಳೊಳಗೆ 48 ಸಾವಿರ ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ. ಯುವಕರಿಗೆ ಮೂರು ಲಕ್ಷಕ್ಕೂ ಹೆಚ್ಚು ಖಾಸಗಿ ವಲಯದ ಉದ್ಯೋಗಗಳನ್ನು ಒದಗಿಸಿದೆ’ ಎಂದು ಹೇಳಿದರು.

‘ಉದ್ಯೋಗವನ್ನು ಹೇಗೆ ಸೃಷ್ಟಿಸಬೇಕೆಂದು ನಮಗೆ ತಿಳಿದಿದೆ. ನಮ್ಮ ಉದ್ದೇಶಗಳೂ ಪ್ರಾಮಾಣಿಕವಾಗಿದೆ. ಜನರ ಬೆಂಬಲದೊಂದಿಗೆ ನಾವು ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುತ್ತೇವೆ’ ಎಂದು ಪ್ರತಿಪಾದಿಸಿದರು.

ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಏಳು ಹಕ್ಕೊತ್ತಾಯಗಳಿರುವ ‘ಪ್ರಣಾಳಿಕೆ’ಯನ್ನು ಬುಧವಾರ ಬಿಡುಗಡೆ ಮಾಡಿದ್ದರು.
.ಮಧ್ಯಮ ವರ್ಗದವರ ಏಳಿಗೆಗೆ ಏಳು ಸಲಹೆ: ಅರವಿಂದ ಕೇಜ್ರಿವಾಲ್.ದೆಹಲಿ ಚುನಾವಣೆ– ಮಹಾಭಾರತದ ಧರ್ಮಯುದ್ಧವಿದ್ದಂತೆ: ಅರವಿಂದ ಕೇಜ್ರಿವಾಲ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.