ಕೊಚ್ಚಿ: ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಇಲ್ಲಿನ ಏಲೂರ್ ಗ್ರಾಮದ ಸಿಪಿಐ (ಎಂ) ಬ್ರಾಂಚ್ ಸಮಿತಿ ರಾಷ್ಟ್ರ ಧ್ವಜಕ್ಕೆ ಬದಲಾಗಿ ಕಾಂಗ್ರೆಸ್ನ ಧ್ವಜ ಹಾರಿಸಿದ ವಿಚಿತ್ರ ಘಟನೆ ನಡೆದಿದೆ.
.ತ್ರಿಶ್ಶೂರ್: ಲೋಕಸಭೆ ಚುನಾವಣೆಗೆ ಮುನ್ನ 30ಸಾವಿರ ನಕಲಿ ಮತದಾರರ ಸೇರ್ಪಡೆ; ಸಿಪಿಎಂ.
ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದ ಬಲದಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನಡೆಸಿದ ಬಳಿಕವೇ ಪ್ರಮಾದ ಗೊತ್ತಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

‘10 ನಿಮಿಷ ಕಾಂಗ್ರೆಸ್ ಧ್ವಜ ಹಾರಿದೆ. ಗೊತ್ತಾದ ಕೂಡಲೇ ಅದನ್ನು ಇಳಿಸಲಾಗಿದೆ. ಅದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರ, ವಿಡಿಯೊ ಹರಿದಾಡಿದೆ.
.ಧರ್ಮಸ್ಥಳ ಪ್ರಕರಣ | ತನಿಖೆ ನಡೆಸಿ, ಸತ್ಯ ಹೊರಗೆಡವಲು ಸಿಪಿಎಂ ಒತ್ತಾಯ.
ಘಟನೆಯ ಬಗ್ಗೆ ಸಿಪಿಐಎಂ ಜಿಲ್ಲಾ ನಾಯಕರೊಬ್ಬರು ಪರಿಶೀಲನೆ ನಡೆಸಿದ್ದು, ತಪ್ಪಾಗಿದ್ದು ಒಪ್ಪಿಕೊಂಡಿದ್ದಾರೆ.

‘ತನ್ನ ಬಳಿ ಹಲವು ಪಕ್ಷಗಳ ಧ್ವಜ ಇದ್ದು, ಸ್ವಾತಂತ್ಯೋತ್ಸವದ ದಿನ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರಧ್ವಜವೆಂದು ತಪ್ಪಾಗಿ ಗ್ರಹಿಸಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಪಕ್ಷ ತೀರ್ಮಾನಿಸಿದೆ’ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.

( ಈ ಸುದ್ದಿಯಲ್ಲಿ ಬಳಸಿರುವ ಚಿತ್ರವು ಎಐ ಸೃಷ್ಟಿಸಿದ ಕಾಲ್ಪನಿಕ ಚಿತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿದ್ದಲ್ಲ)
.ಚುನಾವಣೆ ಲಾಭಕ್ಕಾಗಿ BJPಯಿಂದ ‘ಆಪರೇಷನ್ ಸಿಂಧೂರ’ ದುರ್ಬಳಕೆ ಸಾಧ್ಯತೆ: ಸಿಪಿಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.