ನವದೆಹಲಿ: ತಮ್ಮ ಉತ್ಪನ್ನಗಳನ್ನು ನಗರ ಪ್ರದೇಶಗಳಲ್ಲಿಯೂ ಮಾರಾಟ ಮಾಡಲು ಸಾಧ್ಯವಾಗುವುದರಿಂದಕಿಸಾನ್ ರೈಲು ಯೋಜನೆಯುದೇಶದಾದ್ಯಂತ ಇರುವ ರೈತರಿಗೆ ನರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಹಾಗೂ ಬಿಹಾರ ನಡುವೆ ದೇಶದ ಮೊದಲ ಕಿಸಾನ್ ರೈಲು ಆರಂಭವಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ,‘ದೇಶದ ಅತಿಸಣ್ಣ ರೈತರನ್ನೂ ಒಳಗೊಂಡಂತೆ 2 ದಿನಗಳ ಹಿಂದೆ ದೊಡ್ಡ ಯೋಜನೆಯನ್ನು ಆರಂಭಿಸಲಾಗಿದೆ. ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳ ನಡುವೆ ಕಿಸಾನ್ ರೈಲು ಸಂಚಾರ ಆರಂಭವಾಗಿದೆ’ ಎಂದು ತಿಳಿಸಿದ್ದಾರೆ.

‘ರೈತರು ಮುಂಬೈ ಮತ್ತು ಪುಣೆ ನಗರಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲಿದ್ದಾರೆ. ಈ ರೈಲು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಮೂಲಕ ಹಾದುಹೋಗುವುದರಿಂದ ಅಲ್ಲಿನ ರೈತರಿಗೂ ನೆರವಾಗಲಿದೆ. ಇದು ಹವಾನಿಯಂತ್ರಿತ ರೈಲು ಆಗಿದ್ದು, ತರಕಾರಿ ಪದಾರ್ಥಗಳನ್ನು ಸಂಗ್ರಹಿಸಿಡಲು ಶೈತ್ಯಾಗರ ವ್ಯವಸ್ಥೆಯನ್ನೂ ಹೊಂದಿದೆ. ಟ್ರಕ್‌ಗಳಿಗೆ ಹೋಲಿಸಿದರೆ ರೈಲಿನ ಶುಲ್ಕವೂ ಕಡಿಮೆ’ ಎಂದಿದ್ದಾರೆ.

ಇದನ್ನೂ ಓದಿ:ದೇಶದ ಮೊದಲ ಕಿಸಾನ್ ರೈಲಿಗೆ ಚಾಲನೆ

ದೇಶದ ಮೊಟ್ಟ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಹಸಿರುನಿಶಾನೆ ತೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.