ಚಂಡೀಗಢ/ಜೈಪುರ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಹಿಂದೆಯೇ ಮುಂಜಾಗ್ರತೆಯಾಗಿ ರಾಜಸ್ಥಾನ, ಪಂಜಾಬ್ನ ಗಡಿ ಜಿಲ್ಲೆಯಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಮುಖ್ಯಮಂತ್ರಿ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿ ಎಲ್ಲ ಸರ್ಕಾರಿ ನೌಕರರ ರಜೆಗಳನ್ನು ರದ್ದುಪಡಿಸಲಾಗಿದೆ. ಅಲ್ಲದೆ, ಗಡಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸೂಚನೆಗಳ ಹಿಂದೆಯೇ ಯಾವುದೇ ಪರಿಸ್ಥಿತಿ ಎದುರಿಸಲು ಉಭಯ ರಾಜ್ಯಗಳಲ್ಲೂ ಜಾಗ್ರತೆ ವಹಿಸಲಾಗಿದೆ.

ಪಾಕಿಸ್ತಾನದ ಗಡಿಯು ಪಂಜಾಬ್ಗೆ ಹೊಂದಿಕೊಂಡಂತೆ 532 ಕಿ.ಮೀ. ಇದ್ದರೆ, ರಾಜಸ್ಥಾನಕ್ಕೆ ಹೊಂದಿಕೊಂಡಂತೆ 1,070 ಕಿ.ಮೀ. ಇದೆ.

ಪಂಜಾಬ್ನ ಫಿರೋಜ್ಪುರ್, ಪಠಾಣ್ಕೋಟ್, ಫಾಜಿಲ್ಕಾ, ಅಮೃತಸರ, ಗುರ್ದಾಸ್ಪುರ, ಟರ್ನ್ ಟರನ್ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಸೂಚನೆವರೆಗೆ ಮುಚ್ಚಲಾಗಿದೆ ಎಂದು ಸಚಿವ ಅಮನ್ ಅರೋರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.