ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2024: ಗುರುವಾರದಿಂದ ಕಾಂಗ್ರೆಸ್‌ ಸಮಾವೇಶ

Published 23 ಜನವರಿ 2024, 15:27 IST
Last Updated 23 ಜನವರಿ 2024, 15:27 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷವು ಗುರುವಾರದಿಂದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲಿದೆ. 

ಇತ್ತೀಚೆಗೆ ಕಾಂಗ್ರೆಸ್‌ ಸರ್ಕಾರ ರಚನೆಯಾದ ತೆಲಂಗಾಣದಲ್ಲಿ ಗುರುವಾರ ಸಮಾವೇಶ ನಡೆಯಲಿದೆ. ಜ.28ರಂದು ಉತ್ತರಾಖಂಡದಲ್ಲಿ, 29ರಂದು ಒಡಿಶಾದಲ್ಲಿ, ಫೆಬ್ರುವರಿ 3ರಂದು ದೆಹಲಿಯಲ್ಲಿ, ಫೆ.4ರಂದು ಕೇರಳದಲ್ಲಿ, ಫೆ.10ರಂದು ಹಿಮಾಚಲ ಪ್ರದೇಶದಲ್ಲಿ, 11ರಂದು ಪಂಜಾಬ್‌ನಲ್ಲಿ, 13ರಂದು ತಮಿಳುನಾಡಿನಲ್ಲಿ ಹಾಗೂ 15ರಂದು ಜಾರ್ಖಂಡ್‌ನಲ್ಲಿ ಸಮಾವೇಶ ಜರುಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ. 

ಸಮಾವೇಶದ ಸಂದರ್ಭದಲ್ಲಿ ಬೂತ್‌ನಿಂದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಗಳ ಅಧ್ಯಕ್ಷತೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT