ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೆಲ್ ಖರೀದಿಗೆ 2008ರಲ್ಲೇ ಗುಪ್ತ ಒಪ್ಪಂದವಾಗಿದೆ: ನಿರ್ಮಲಾ ತಿರುಗೇಟು

Last Updated 20 ಜುಲೈ 2018, 9:21 IST
ಅಕ್ಷರ ಗಾತ್ರ

ನವದೆಹಲಿ: 'ರಫೆಲ್‌ ವಿಮಾನ ಖರೀದಿ ಸಂಬಂಧ ಫ್ರಾನ್ಸ್‌ನಲ್ಲಿ ಗುಪ್ತ ಒಪ್ಪಂದವನ್ನು 2008ರಲ್ಲಿ ಮಾಡಿಕೊಳ್ಳಲಾಗಿದೆ. ಇದು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ವಿರುದ್ಧ ರಾಹುಲ್‌ ಗಾಂಧಿ ಮಾಡಿದ್ದ ಆಪಾದನೆಗೆ ಸಂಸತ್‌ನಲ್ಲಿ ತಿರುಗೇಟು ನೀಡಿದರು.

ಸಂಸತ್‌ನಲ್ಲಿ ಅವಿಶ್ವಾಸ ಮತದ ಮೇಲೆ ಶುಕ್ರವಾರ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ರಾಹುಲ್‌ ಗಾಂಧಿ ಅವರು ರಫೆಲ್‌ ವಿಚಾರ ಮಾತನಾಡುವಾಗ ರಕ್ಷಣಾ ಸಚಿವರಾದ ನಮ್ಮ ಹೆಸರು ಪ್ರಸ್ತಾಪಿಸಿದರು. ಈ ಮೂಲಕ ಮಾತನಾಡಲು ಅವಕಾಶ ಕಲ್ಪಸಿದ್ದಾರೆ. ಇದಕ್ಕೆ ಅಭಿನಂದಿಸುತ್ತೇನೆ. ನಮ್ಮ ಹೆಸರು ಪ್ರಸ್ತಾಪಿಸಿದ್ದರಿಂದ ಮಾತನಾಡುತ್ತಿದ್ದೇನೆ ಎಂದರು.

ರಫೆಲ್‌ ಒಪ್ಪಂದದ ಬಗ್ಗೆ ಮಾಹಿತಿ ಬಹಿರಂಗಗೊಳಿಸುತ್ತಿಲ್ಲ ಎಂದು ರಾಹುಲ್‌ಗಾಂಧಿ ಆಪಾದಿಸಿದ್ದಾರೆ. ಆದರೆ, ಫ್ರಾನ್ಸ್‌ ಅಧ್ಯಕ್ಷರೇ ಇದನ್ನು ಮಾಧ್ಯಮದವರಿಗೆ ಹೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ರಾಹುಲ್‌ ಗಾಂಧಿ ಮತ್ತು ಫ್ರಾನ್ಸ್ ಅಧ್ಯಕ್ಷರ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ರಕ್ಷಣಾ ಸಚಿವರು ಹೇಳಿದರು. ಇದಕ್ಕೂ ಮೊದಲು ಮಾತನಾಡಿದ್ದ ರಾಹುಲ್‌, ಫ್ರಾನ್ಸ್ ಅಧ್ಯಕ್ಷರ ಜತೆ ನಾನು ಮಾತನಾಡಿದ್ದೇನೆ ಎಂದಿದ್ದರು.

ರಫೆಲ್‌ ವಿಮಾನ ಖರೀದಿಗೆ 2008ರಲ್ಲೇ ಒಪ್ಪಂದವಾಗಿದೆ ಎಂದ ನಿರ್ಮಲಾ ಸೀತಾರಾಮನ್‌ ಅವರು, ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ. ಆ್ಯಂಟನಿ ಅವರು ಇದಕ್ಕೆ ಸಹಿಯನ್ನೂ ಹಾಕಿದ್ದಾರೆ ಎಂದು ದಾಖಲೆ ಪ್ರತಿಯನ್ನು ಸದನದಲ್ಲಿ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT