ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ 2008ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ತೀರ್ಪನ್ನು ಎನ್ಐಎ ವಿಶೇಷ ಕೋರ್ಟ್ ಜುಲೈ 31ರಂದು ಪ್ರಕಟಿಸಲಿದೆ.

ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್, ಮೇ 8ರಂದು ಕೋರ್ಟ್ನಲ್ಲಿ ಹಾಜರಿರುವಂತೆ ಆರೋಪಿಗಳಿಗೆ ಸೂಚಿಸಿತ್ತು.

ನ್ಯಾಯಾಧೀಶರಾದ ಎ.ಕೆ.ಲಾಹೋಟಿ ಅವರು ಗುರುವಾರ, ‘ಬೃಹತ್ ದಾಖಲೆಗಳಿದ್ದು, ತೀರ್ಪು ಪ್ರಕಟಿಸಲು ಹೆಚ್ಚಿನ ಸಮಯ ಬೇಕು. ಜುಲೈ 31ರಂದು ಎಲ್ಲ ಆರೋಪಿಗಳು ಹಾಜರಿರಬೇಕು’ ಎಂದು ಆರೋಪಿಗಳಿಗೆ ತಿಳಿಸಿದರು.

2008ರ ಸೆ. 29ರಂದು ರಂಜಾನ್ ಮಾಸದಲ್ಲಿ ನವರಾತ್ರಿ ಆಚರಣೆಗೆ ಮುನ್ನಾದಿನ ಸ್ಫೋಟ ನಡೆದಿತ್ತು. 6 ಜನರು ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಮುಂಬೈ ಭಯೋತ್ಪಾದಕರ ನಿಗ್ರಹ ಪಡೆ ಪ್ರಾಥಮಿಕ ತನಿಖೆ ನಡೆಸಿದ್ದು, ನಂತರ ತನಿಖೆಯ ಹೊಣೆಯನ್ನು ಎನ್ಐಎ ವಹಿಸಿಕೊಂಡಿತ್ತು.

ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.