ನವದದೆಹಲಿ: ಮನಮೋಹನ ಸಿಂಗ್ ಅವರು ವಿದೇಶಿ ನೀತಿಗಳಲ್ಲಿ ‘ಕಾರ್ಯತಂತ್ರ ತಿದ್ದುಪಡಿ’ಗಳನ್ನು ಮಾಡಿದ್ದರು ಎಂದು ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ಅವರು ಹೇಳಿದ್ದಾರೆ.

‘ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ’ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
.ನರೇಗಾ, ಆರ್ಟಿಇ, ಆರ್ಟಿಐ, ಆಹಾರ ಭದ್ರತೆ: ಸಾಮಾನ್ಯನ ಬಲಪಡಿಸಿದ ಮನಮೋಹನ....
‘ಭಾರತದ ಆರ್ಥಿಕ ಸುಧಾರಣೆಯ ಶಿಲ್ಪಿ ಎಂದು ಕರೆಸಿಕೊಳ್ಳುವಷ್ಟೇ ಸಮಾನವಾಗಿ ಅವರು ದೇಶದ ವಿದೇಶಿ ನೀತಿಗಳಲ್ಲಿ ಕಾರ್ಯತಂತ್ರದ ತಿದ್ದುಪಡಿಗಳನ್ನು ಮಾಡಿದವರೂ ಕೂಡ’ ಎಂದು ಜೈಶಂಕರ್ ಹೊಗಳಿದ್ದಾರೆ.

‘ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ಅವರು ತಮ್ಮ ಮೃದು ವ್ಯಕ್ತಿತ್ವ ಹಾಗೂ ಸೌಜನ್ಯದ ವರ್ತನೆಯಿಂದ ಸದಾ ಚಿರಸ್ಥಾಯಿಯಾಗಿರುತ್ತಾರೆ’ ಎಂದು ಹೇಳಿದ್ದಾರೆ.
.Manmohan Singh: ಜೀವನ ಹಸನು ಮಾಡಿದ ಸಜ್ಜನ.
ಸದ್ಯ ಜೈ ಶಂಕರ್ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ.

92 ವರ್ಷದ ಸಿಂಗ್ ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
.Manmohan Singh: ಅರ್ಥಮಾಂತ್ರಿಕ ಅಸ್ತಂಗತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.