ನವದೆಹಲಿ: ಭಾರತ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ 'ಭಾರತವು ಎಂದಿಗೂ ತಟಸ್ಥ ನಿಲುವು ಹೊಂದಿಲ್ಲ. ಬದಲಾಗಿ ಶಾಂತಿಯ ಪರವಾಗಿದೆ' ಎಂದು ಪುಟಿನ್ಗೆ ಮೋದಿ ಹೇಳಿದ್ದಾರೆ.

ಉಕ್ರೇನ್ನಲ್ಲಿ ಯುದ್ಧ ಕೊನೆಗಾಣಿಸಿ ಶಾಂತಿ ನೆಲೆಸಲು ಮಾಡುವ ಎಲ್ಲ ಪ್ರಯತ್ನಗಳನ್ನು ಭಾರತ ಬೆಂಬಲಿಸುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.
.ರಷ್ಯಾ ಅಧ್ಯಕ್ಷ ಪುಟಿನ್ ಕಳೆದ ಸಲ ಭಾರತಕ್ಕೆ ಬಂದಾಗ ಏನಾಗಿತ್ತು? ಇಲ್ಲಿದೆ ವಿವರ.ಭಾರತಕ್ಕೆ ಬಂದ ಪುಟಿನ್ಗೆ ‘ಭಗವದ್ಗೀತೆ’ ನೀಡಿದ ಮೋದಿ: ಉಭಯ ನಾಯಕರ ಚಿತ್ರಗಳು.
'ಉಕ್ರೇನ್ ಸಂಘರ್ಷ ಆರಂಭವಾದ ನಂತರ ನಾವು ಹಲವು ಚರ್ಚೆಗಳನ್ನು ನಡೆಸುತ್ತಿದ್ದೇವೆ. ಆಪ್ತ ಸ್ನೇಹಿತನಾಗಿ ನೀವು ನಮಗೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಲೇ ಬಂದಿದ್ದೀರಿ. ನಂಬಿಕೆಯೇ ಮುಖ್ಯ ಎಂದು ನನಗನಿಸುತ್ತದೆ' ಎಂದು ಮೋದಿ ಹೇಳಿದ್ದಾರೆ.

'ನಾವೆಲ್ಲರೂ ಶಾಂತಿಯ ಮಾರ್ಗವನ್ನು ಕಂಡುಕೊಳ್ಳಬೇಕು. ಇತ್ತೀಚಿನ ಪ್ರಯತ್ನಗಳ ಬಗ್ಗೆ ನನಗೆ ತಿಳಿದಿದೆ. ಜಗತ್ತಿನಲ್ಲಿ ಶಾಂತಿ ನೆಲೆಸುವ ಬಗ್ಗೆ ನನಗೆ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

'ಭಾರತ ತಟಸ್ಥ ನೀತಿ ಹೊಂದಿಲ್ಲ ಎಂದು ನಾನು ಹೇಳುತ್ತೇನೆ. ಭಾರತವು ಶಾಂತಿಯ ಪರವಾಗಿದೆ. ಶಾಂತಿ ನೆಲೆಸಲು ಬೇಕಾದ ಎಲ್ಲ ಪ್ರಯತ್ನಗಳಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.