ಹಾಂಗ್‌ಕಾಂಗ್: ಚೀನಾ ಜಾರಿಗೊಳಿಸಿರುವ ಕಠಿಣ ಕಾನೂನನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸುಮಾರು 280ಕ್ಕೂ ಹೆಚ್ಚು ಜನರನ್ನು ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘಿಸಿದ ಆರೋಪದಡಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಸುಮಾರು50 ಸಾವಿರ ಜನರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆಅಪರಿಚಿತ ಕಾರ್ಯಕರ್ತರು ಆನ್‌ಲೈನ್ ಮೂಲಕ ಕರೆ ನೀಡಿದ್ದರು. ಅದರಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ‘ಹಾಂಗ್‌ಕಾಂಗ್ ಅನ್ನು ಮುಕ್ತಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೀಗಾಗಿಅನುಮಾನಾಸ್ಪದವಾಗಿ ಹಾಗೂಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪದಡಿ 270 ಜನರನ್ನು, ದುರ್ವರ್ತನೆ ತೋರಿದ ಕಾರಣ ಐವರನ್ನು, ಗುರುತಿನ ಚೀಟಿ ತೋರಿಸದ ಐವರನ್ನು ವಶಕ್ಕೆ ಪಡೆಯಲಾಗಿದೆ. ಹಾಂಗ್‌ಕಾಂಗ್ ಸ್ವಾತಂತ್ರ್ಯದ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಭದ್ರತಾ ಕಾನೂನು ಉಲ್ಲಂಘಿಸಿದ ಓರ್ವ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಇದಕ್ಕೂ ಮೊದಲು,ಪ್ರತಿಭಟನೆ ಸಂಬಂಧ ಪೂರ್ವ ಕೌಲೂನ್ ಸುತ್ತಲೂ ಜಲಫಿರಂಗಿ ಹಾಗೂ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸುಮಾರು 2,000 ರಕ್ಷಣಾ ಸಿಬ್ಬಂದಿಯನ್ನುನೇಮಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದವು.

ಮುಂದಿನ ಅವಧಿಗೆ ಶಾಸಕರನ್ನು ಆಯ್ಕೆ ಮಾಡಲು ಹಾಂಗ್‌ಕಾಂಗ್‌ನಲ್ಲಿ ಮತದಾನ ನಡೆಯಬೇಕಿದ್ದ ಸಂದರ್ಭದಲ್ಲೇ ಪ್ರತಿಭಟನೆಗಳು ಆರಂಭವಾಗಿದ್ದವು. ಇದರ ನಡುವೆಜುಲೈ ಅಂತ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿಚೀನಾ ಪರ ಹಾಂಗ್‌ಕಾಂಗ್ ಆಡಳಿತವು ಚುನಾವಣೆಯನ್ನು ಮುಂದೂಡಿತ್ತು.

ಹಾಂಗ್‌ಕಾಂಗ್‌ನಲ್ಲಿಚೀನಾ ರೂಪಿಸಿರುವ ರಾಷ್ಟ್ರೀಯ ಭದ್ರತಾ ಕಾನೂನುಜುಲೈ 1ರಿಂದ ಜಾರಿಗೆ ಬಂದಿದೆ. ಪ್ರತ್ಯೇಕತಾವಾದ, ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ ಮತ್ತು ವಿದೇಶಿ ಪಡೆಗಳೊಂದಿಗಿನ ಒಡನಾಟದಂತಹ ಗಂಭೀರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.