ನವದೆಹಲಿ: ‘ಆನ್‌ಲೈನ್ ರಮ್ಮಿ ಆಡಿ ಹಣ ಕಳೆದುಕೊಂಡ ಯುವಜನತೆ ಅಪರಾಧ ಕೃತ್ಯಗಳಿಗೆ ಇಳಿಯುತ್ತಿದೆ. ಹೀಗಾಗಿ ಆನ್‌ಲೈನ್ ರಮ್ಮಿಯನ್ನು ನಿಷೇಧಿಸಬೇಕು’ ಎಂದು ರಾಜ್ಯಸಭೆಯಬಿಜೆಪಿಯ ಸದಸ್ಯ ಕೆ.ಸಿ.ರಾಮಮೂರ್ತಿ ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.

‘ಕ್ರಿಕೆಟ್ ತಾರೆ ಎಂ.ಎಸ್.ಧೋನಿ ಹಾಗೂ ಸಿನಿಮಾ ತಾರೆಯರು ಆನ್‌ಲೈನ್ ರಮ್ಮಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆನ್‌ಲೈನ್ ರಮ್ಮಿ ಯಾವ ರೀತಿಯಲ್ಲಿ ಖ್ಯಾತಿಗಳಿಸುತ್ತಿದೆ ಎನ್ನುವುದನ್ನು ತೋರಿಸುತ್ತದೆ. ವಾಸ್ತವದಲ್ಲಿ ಇದೊಂದು ಜೂಜು ಹಾಗೂ ಬೆಟ್ಟಿಂಗ್ ಆಟ. ಹೆಚ್ಚು ಹಣಗಳಿಸಲೆಂದು ಇದನ್ನು ಆಟವಾಡುತ್ತಾ ಹಣ ಕಳೆದುಕೊಂಡವರೇ ಹೆಚ್ಚಾಗಿದ್ದು, ಹಲವು ಕುಟುಂಬಗಳನ್ನು ನಾಶ ಮಾಡಿದೆ’ ಎಂದರು.

‘ಹಲವರಿಗೆ ಈ ಆಟ ಚಟವಾಗಿದೆ. ಸೆಳೆಯುವ ಜಾಹೀರಾತುಗಳ ಮುಖಾಂತರ ಯುವಜನತೆ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಈ ಆಟ ಆಕರ್ಷಿಸುತ್ತಿದೆ. ಹಣವನ್ನು ಕಳೆದುಕೊಂಡ ಯುವಕರು, ಚಟವನ್ನು ಮುಂದುವರಿಸಲು ಅಪರಾಧ ಕೃತ್ಯಗಳಿಗೆ ಇಳಿಯುತ್ತಿದ್ದಾರೆ. ಆನ್‌ಲೈನ್ ರಿಯಲ್ ಮನಿಗೇಮಿಂಗ್ ಕ್ಷೇತ್ರವು ₹2,200 ಕೋಟಿ ಮೊತ್ತದ್ದಾಗಿದ್ದು, 2023ರ ವೇಳೆಗೆ ಇದು ₹12 ಸಾವಿರ ಕೋಟಿ ತಲುಪಲಿದೆ. ದೇಶದಲ್ಲಿ ಯಾವುದೇ ಕೈಗಾರಿಕೆಗಳು ಈ ವೇಗದಲ್ಲಿ ಬೆಳೆಯುತ್ತಿಲ್ಲ’ ಎಂದು ಕೆಪಿಎಂಜೆ ವರದಿ ಉಲ್ಲೇಖಿಸಿ ರಾಮಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.