ನವದೆಹಲಿ: ಪ್ಯಾಲೆಸ್ಟೀನ್ ಎಂಬ ಹೆಸರಿರುವ ಕೈಚಿಲದೊಂದಿಗೆ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಂಡು ಚರ್ಚೆಗೆ ಕಾರಣವಾಗಿದ್ದ ಮರು ದಿನವೇ, ಬಾಂಗ್ಲಾದೇಶದಲ್ಲಿ ಹಿಂದೂ ಸಹಿತ ಅಲ್ಪಸಂಖ್ಯಾತರ ಪರ ಘೋಷಣೆಯುಳ್ಳ ಚೀಲ ಹಿಡಿದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗಮನ ಸೆಳೆದಿದ್ದಾರೆ.

‘ಬಾಂಗ್ಲಾದೇಶದ ಹಿಂದೂ ಹಾಗೂ ಕ್ರೈಸ್ತರ ಪರವಾಗಿ ನಿಲ್ಲುತ್ತೇವೆ’ ಎಂಬ ಘೋಷವಾಕ್ಯವುಳ್ಳ ಕೈಚೀಲವನ್ನು ಹಿಡಿದು ಪ್ರಿಯಾಂಕಾ ಸಂಸತ್ ಭವನದ ಎದುರು ಘೋಷಣೆ ಕೂಗಿದರು. ಶೇಖ್ ಹಸೀನಾ ಅವರ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಉಂಟಾದ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿರುವುದನ್ನು ಇವರು ಖಂಡಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಈ ಕೈಚೀಲ ಅಭಿಯಾನದಿಂದ ಪ್ರೇರಣೆಗೊಂಡ ವಿರೋಧ ಪಕ್ಷಗಳ ಇತರ ಸಂಸದರೂ ಇಂಥದ್ದೇ ಮಾದರಿಯ ಚೀಲ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
.ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ: 269 ಪರ,198 ವಿರೋಧಿಸಿ ಮತ.ಏಕಕಾಲಕ್ಕೆ ಚುನಾವಣೆ: ಸಂವಿಧಾನ, ಒಕ್ಕೂಟ ವಿರೋಧಿ ಮಸೂದೆ ಎಂದ ಪ್ರಿಯಾಂಕಾ ಗಾಂಧಿ.
ಶೂನ್ಯವೇಳೆಯಲ್ಲಿ ಈ ಕುರಿತು ಮಾತನಾಡಿದ ಪ್ರಿಯಾಂಕಾ, ‘ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಕೇಂದ್ರ ಸರ್ಕಾರ ಧ್ವನಿ ಎತ್ತಬೇಕು. ತನ್ನ ಪ್ರತಿಭಟನೆಯನ್ನು ದಾಖಲಿಸಬೇಕು. ಹಿಂದೂ ಹಾಗೂ ಕ್ರೈಸ್ತರ ಹಿತ ಕಾಯಲು ಕೇಂದ್ರ ಸರ್ಕಾರವು ಢಾಕಾದೊಂದಿಗೆ ರಾಜತಾಂತ್ರಿಕ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಈ ‘ಕೈಚೀಲ ಅಭಿಯಾನ’ವು ಸಂಸತ್ತಿನಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತು. ಸೋಮವಾರ ಧರಿಸಿದ್ದ ‘ಪ್ಯಾಲೆಸ್ಟೀನ್’ ಎಂಬ ಬರಹ ಹಾಗೂ ಕಲ್ಲಂಗಡಿ ಹಣ್ಣಿನ ಚಿತ್ರವಿರುವ ಚೀಲ ಹಿಡಿದು ಬಂದಿದ್ದು ಬಿಜೆಪಿ ಸದಸ್ಯರ ಕಣ್ಣು ಕೆಂಪಗಾಗಿಸಿತ್ತು. ಪ್ರಿಯಾಂಕಾ ನಡೆಗೆ ಆಡಳಿತಾರೂಢ ಸಂಸದರು ತೀವ್ರ ಟೀಕೆ ವ್ಯಕ್ತಪಡಿಸಿದರು. ಆದರೆ ಟೀಕೆಯನ್ನು ಪ್ರಿಯಾಂಕಾ ತಿರಸ್ಕರಿಸಿದರು.

‘ನಾನು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವವರು ಯಾರು? ಮಹಿಳೆಯೊಬ್ಬಳು ಏನು ಧರಿಸಬೇಕು ಎಂದು ನಿರ್ಧರಿಸುವುದಾದರೆ ಇದು ಪುರುಷ ಪ್ರಧಾನ ವ್ಯವಸ್ಥೆಯೇ ಸರಿ. ನಾನು ಅದನ್ನು ಒಪ್ಪುವುದಿಲ್ಲ. ನನಗೆ ಏನು ಬೇಕೋ ನಾನು ಅದನ್ನೇ ಧರಿಸುತ್ತೇನೆ. ನನ್ನ ನಂಬಿಕೆ ಏನು ಎಂಬುದನ್ನು ನಾನು ಈಗಾಗಲೇ ತಿಳಿಸಿದ್ದೀನಿ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ನನ್ನ ಟ್ವಿಟರ್ ಖಾತೆಯನ್ನು ಒಮ್ಮೆ ನೋಡಿ. ಅಲ್ಲಿ ಎಲ್ಲವನ್ನೂ ಬರೆದಿದ್ದೇನೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕಾ ಕೈಚೀಲ ಅಭಿಯಾನಕ್ಕೆ ಬಿಜೆಪಿ ತಿರುಗೇಟು

ಪ್ಯಾಲೆಸ್ಟೀನ್ ರಾಯಭಾರ ಕಚೇರಿಯ ಪ್ರತಿನಿಧಿ ಅಬೆದ್ ಎಲ್ರಾಝೆಗ್ ಅಬು ಝಹೆರ್ ಅವರು ಪ್ರಿಯಾಂಕಾ ಗಾಂಧಿ ಅವರ ಮನೆಗೆ ಭೇಟಿ ನೀಡಿರುವುದು ಕೋಮು ಭಾವನೆ ಮೂಡಿಸುವ ಹುನ್ನಾರವಾಗಿದೆ. ದೇಶದಲ್ಲಿನ ವಿಷಯಗಳಲ್ಲಿ ವಿದೇಶಿಯರ ಭಾವನೆಯನ್ನು ದಾಖಲುಪಡಿಸುವ ಸಂಚು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

‘ದೇಶದ ನಾನಾ ಮೂಲೆಯಿಂದ ಸಂಸದರಾಗಿ ಆಯ್ಕೆಯಾಗುವವರು ಈ ನೆಲದ 140 ಕೋಟಿ ಜನರ ಪರ ಕಾಳಜಿ ಹೊಂದಿರುತ್ತಾರೆ. ಅವರ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ. ಈ ಮೊದಲು ಅಸಾದುದ್ದೀನ್ ಓವೈಸಿ ಅವರು ‘ಜೈ ಪ್ಯಾಲೆಸ್ಟೀನ್’ ಎಂಬ ಘೋಷಣೆ ಕೂಗಿದರು. ಇದೀಗ ಪ್ರಿಯಾಂಕಾ ಅವರು ಪ್ಯಾಲಿಸ್ಟೀನ್ ಎಂಬ ಕೈಚೀಲ ಹಿಡಿದು ಬಂದಿದ್ದಾರೆ. ಇದು ಕೋಮು ಭಾವನೆ ಹರಡುವ ಯತ್ನವಾಗಿದೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ‘ಬಾಂಗ್ಲಾದೇಶದಲ್ಲಿನ ಹಿಂದೂಗಳ ಪರವಾಗಿ ಧ್ವನಿ ಎತ್ತಿ. ಅಲ್ಲಿ ನಡೆಯುತ್ತಿರುವ ದೌರ್ಜನ್ಯ ತಪ್ಪಿಸಲು ಏನಾದರೂ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಇಂಥ ಮೂರ್ಖ ಹೇಳಿಕೆಗಳನ್ನು ನೀಡಬೇಡಿ’ ಎಂದಿದ್ದಾರೆ.
.ಆನ್ಲೈನ್ ಮೂಲಕ NEET ಪರೀಕ್ಷೆ?: ಶೀಘ್ರ ನಿರ್ಧಾರ ಎಂದ ಸಚಿವ ಪ್ರಧಾನ್.ಅನ್ವರ್ ಮಾಣಿಪ್ಪಾಡಿ ವರದಿ: ಸಿಎಂ ಅಧಿವೇಶನದಲ್ಲಿ ಮಂಡಿಸಿ ಚರ್ಚಿಸಲಿ; ಈಶ್ವರಪ್ಪ.
‘1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ನಡೆದ ಯುದ್ಧದಿಂದಾಗಿ ಬಾಂಗ್ಲಾದೇಶ ವಿಮೋಚನೆಗೊಂಡಿತು. ಅಂದು ನಡೆದ ಆ ಯುದ್ಧವು ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುವ ಹಾಗೂ ದೌರ್ಜನ್ಯ ಎಸಗುವವರ ವಿರುದ್ಧವಾಗಿತ್ತು. ಭಾರತದ ಅಂದಿನ ತತ್ವಗಳು ನಿಜಕ್ಕೂ ಅದ್ಭುತವಾಗಿದ್ದವು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವೂ ಇದೇ ತತ್ವದಡಿ ನಡೆದಿತ್ತು. ನಾವೆಲ್ಲರೂ ಅಂದು ಒಂದಾಗಿದ್ದೆವು. ದೌರ್ಜನ್ಯ ಖಂಡಿಸಿ ಇಂದಿರಾ ಗಾಂಧಿ ಅವರು ಇಡೀ ಜಗತ್ತು ಸುತ್ತಿದ್ದರು. ಯಾರೂ ಕೈಹಿಡಿಯದಿದ್ದಾಗ ಭಾರತ ಬಾಂಗ್ಲಾ ಪರ ನಿಂತಿತು’ ಎಂದಿದ್ದಾರೆ.

‘ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೀನ್ ರಾಷ್ಟ್ರಗಳನ್ನು ಭಾರತವು ಅಧಿಕೃತವಾಗಿ ಬೆಂಬಲಿಸುತ್ತಲೇ ಬಂದಿದೆ. ಇಸ್ರೇಲ್ನಂತೆಯೇ ಪ್ಯಾಲೆಸ್ಟೀನ್ ಕೂಡಾ ಸ್ವತಂತ್ರ ರಾಷ್ಟ್ರವಾಗಿರಬೇಕು ಎಂಬುದನ್ನು ಪ್ರತಿಪಾದಿಸಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ಯಾಲೆಸ್ಟೀನ್ ಕುರಿತ ಪ್ರಶ್ನೆಯೊಂದಕ್ಕೆ ಕಳೆದವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಪ್ಯಾಲೆಸ್ಟೀನ್ನ ಸಾರ್ವಭೌಮತ್ವ ಹಾಗೂ ಸ್ವತಂತ್ರ ರಾಷ್ಟ್ರ ಸ್ಥಾನಮಾನವನ್ನು ಭಾರತವು ಸದಾ ಬೆಂಬಲಿಸಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದ ನಂತರ ವಿಶ್ವಸಂಸ್ಥೆ ತೆಗೆದುಕೊಂಡ 13 ನಿರ್ಣಯಗಳಲ್ಲಿ ಪ್ಯಾಲೆಸ್ಟೀನ್ ಪರ ಭಾರತವು 10 ನಿರ್ಣಯಗಳನ್ನು ಬೆಂಬಲಿಸಿದೆ’ ಎಂದು ಮಾಹಿತಿ ನೀಡಿದ್ದರು. ಜತೆಗೆ 70 ಟನ್ನಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿರುವ ಕುರಿತೂ ತಿಳಿಸಿದ್ದರು.
.ಕನ್ನಡ ಸಿನಿಮಾ ನನ್ನ ಆದ್ಯತೆ: ‘ಯುಐ’ ನಟಿ ರೀಷ್ಮಾ ನಾಣಯ್ಯ ಸಂದರ್ಶನ.ಡಿ.24ಕ್ಕೆ ಶಸ್ತ್ರಚಿಕಿತ್ಸೆ, ಅದರ ಮೊದಲು ‘ಯುಐ’ ನೋಡುವೆ: ಶಿವರಾಜ್ಕುಮಾರ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.