ನವದೆಹಲಿ: ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸ್ತುತ ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯ ಕೈದಿಗಳು ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು (ಶುಕ್ರವಾರ) ಸಂಸತ್ತಿಗೆ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಲಭ್ಯವಿರುವ ಅಂಕಿಅಂಶಗಳ ಆಧಾರದಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ನೀಡಿದ ಲಿಖಿತ ಉತ್ತರದಲ್ಲಿ ಈ ಕುರಿತು ತಿಳಿಸಿದ್ದಾರೆ.

ಸೌದಿ ಅರೇಬಿಯಾ, ಕುವೈತ್, ಯುಎಇ, ಕತಾರ್, ನೇಪಾಳ, ಪಾಕಿಸ್ತಾನ, ಅಮೆರಿಕ, ಶ್ರೀಲಂಕಾ, ಸ್ಪೇನ್, ರಷ್ಯಾ, ಇಸ್ರೇಲ್, ಚೀನಾ, ಬಾಂಗ್ಲಾದೇಶ, ಅರ್ಜೆಂಟೀನಾ ಸೇರಿದಂತೆ 86 ದೇಶಗಳ ಕಾರಾಗೃಹಗಳಲ್ಲಿ ಭಾರತೀಯ ಪ್ರಜೆಗಳಿದ್ದಾರೆ.

ಈ ಪೈಕಿ ಸೌದಿ ಅರೇಬಿಯಾದ ಕಾರಾಗೃಹಗಳಲ್ಲಿ ಅತಿ ಹೆಚ್ಚು 2,633 ಭಾರತೀಯ ಕೈದಿಗಳಿದ್ದಾರೆ.

ಯಾವ ಯಾವ ದೇಶಗಳಲ್ಲಿ ಎಷ್ಟೆಷ್ಟು ಕೈದಿಗಳು?

ಸೌದಿ ಅರೇಬಿಯಾ: 2,633

ಯುಎಇ: 2,518

ನೇಪಾಳ: 1,317

ಕತಾರ್: 6,11

ಪಾಕಿಸ್ತಾನ: 266

ಶ್ರೀಲಂಕಾ: 98

ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ ಬಳಿಕ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ವಿಶೇಷವಾಗಿ ಕೇರಳದವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲಭ್ಯವಿರುವ ಮಾಹಿತಿಯ ಪ್ರಕಾರ ಕತಾರ್ ಜೈಲಿನಲ್ಲಿರುವ ಭಾರತೀಯ ಕೈದಿಗಳ ಸಂಖ್ಯೆ 611 ಆಗಿದೆ. ಆದಾಗ್ಯೂ, ಗೌಪ್ಯತಾ ಕಾನೂನು ನಿಯಮದಿಂದಾಗಿ ಸಂಬಂಧಪಟ್ಟ ವ್ಯಕ್ತಿಯ ಒಪ್ಪಿಗೆ ಇಲ್ಲದೇ ಕತಾರ್ ಸರ್ಕಾರವು ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಹಾಗಾಗಿ ರಾಜ್ಯವಾರು ಸಂಖ್ಯೆಯ ಅಂಕಿಅಂಶ ಲಭ್ಯವಿಲ್ಲ ಎಂದು ಹೇಳಿದ್ದಾರೆ.

ವಿದೇಶಿ ಜೈಲಿನಲ್ಲಿರುವ ಭಾರತೀಯ ಕೈದಿಗಳ ಸುರಕ್ಷತೆ, ಯೋಗಕ್ಷೇಮ ಮತ್ತು ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
.ಪಾಕ್ ಜೈಲಿನಲ್ಲಿ ಭಾರತೀಯ ಕೈದಿ ಸಾವು: ತನಿಖೆಗೆ ಆದೇಶ.ಹಿಂಡಲಗಾ ಕೇಂದ್ರ ಕಾರಾಗೃಹ: ಚಿಕಿತ್ಸೆಗೆ ಸ್ಪಂದಿಸದೆ ಕೈದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.