ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್: ‘ಓಪನ್‌ ಹೈಮರ್’ಗೆ 7 ವಿಭಾಗದಲ್ಲಿ ಪ್ರಶಸ್ತಿ ಗರಿ

Published 12 ಮಾರ್ಚ್ 2024, 0:17 IST
Last Updated 12 ಮಾರ್ಚ್ 2024, 0:17 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಸ್ಟೋಫರ್ ನೋಲನ್ ಅವರ ಆತ್ಮಚರಿತ್ರೆ ಆಧರಿತ ಚಿತ್ರ ‘ಓಪನ್‌ ಹೈಮರ್’ ಗರಿಷ್ಠ ಸಂಖ್ಯೆಯ ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದಿದೆ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 96ನೇ ಆವೃತ್ತಿ ಪ್ರಶಸ್ತಿ ಸಮಾರಂಭದಲ್ಲಿ ಓಪನ್‌ ಹೈಮರ್‌ ಚಿತ್ರ ವಿವಿಧ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಓಪನ್‌ ಹೈಮರ್‌ನ ಚಿತ್ರದ ನಟ ಸಿಲ್ಲಿಯನ್ ಮರ್ಫಿ (ಅತ್ಯುತ್ತಮ ನಟ), ರಾಬರ್ಟ್‌ ಡೌನೆ ಜ್ಯೂನಿಯರ್ (ಉತ್ತಮ ಪೋಷಕ ನಟ),  ಹಾಯ್ಟೆ ವಾನ್ ಹಾಯ್ಟೆಮಾ (ಉತ್ತಮ ಚಿತ್ರಕತೆ), ಜೆನ್ನಿಫರ್‌ ಲೇಮ್ (ಉತ್ತಮ ಸಂಕಲನ) ಸೇರಿ 7 ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅತ್ಯುತ್ತಮ ನಟಿ ಪ್ರಶಸ್ತಿಯು ‘ಪೂರ್‌ ಥಿಂಗ್ಸ್’ ಚಿತ್ರದ ನಟನೆಗಾಗಿ ಎಮ್ಮಾ ಸ್ಟೋನ್ ಅವರಿಗೆ ಸಂದಿತು. ಇವರು 2017ರಲ್ಲಿಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT