ಬೆಂಗಳೂರು: ‘ಪಾಕಿಸ್ತಾನವನ್ನು ಹತೋಟಿಯಲ್ಲಿ ಇಡಲು ನಾವು (ಕಾಂಗ್ರೆಸ್ ಪಕ್ಷ) ಪ್ರಧಾನಿಗೆ ಬೆಂಬಲ ನೀಡಿದ್ದೇವೆ. ಆದರೆ, ಭಾರತ ದೇಶದ ಸೈನಿಕರಿಗಾಗಲಿ, ಜನರಿಗಾಗಲಿ ಯಾವುದೇ ರೀತಿಯ ತೊಂದರೆ ಆಗಬಾರದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸಲು ನಾವು ಪ್ರಧಾನಿಗೆ ಈಗಾಗಲೇ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ’ ಎಂದರು.

‘ದೇಶದ ಜನರ ಅನಿಸಿಕೆ ಹಾಗೂ ಭಾವನೆಗೆ ಪೂರಕವಾಗಿ ಎಲ್ಲ ಪಕ್ಷಗಳು ಮೋದಿ ಅವರಿಗೆ ಅಧಿಕಾರ ನೀಡಿವೆ. ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆಗಾಗಿ ಆದಷ್ಟು ಬೇಗ ಒಳ್ಳೆಯ ಹೆಜ್ಜೆಗಳನ್ನು ಇಡಬೇಕು’ ಎಂದರು.

‘ಸಂಸತ್ ಅಧಿವೇಶನ ಕರೆಯಬೇಕು ಎಂದು ಎಲ್ಲ ಪಕ್ಷದವರು ಒಂದಾಗಿ ಹೇಳಿದ್ದೇವೆ. ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಪ್ರಧಾನಿ ಮಾಹಿತಿ ನೀಡಬೇಕು. ಕೆಲವು ಗುಪ್ತ ಕಾರ್ಯಸೂಚಿಗಳಿರುತ್ತವೆ. ಅದನ್ನು ಮಾಡಲಿ. ಇವತ್ತಿನ ಪರಿಸ್ಥಿತಿ ಏನಿದೆ? ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಎರಡೂ ಸದನಗಳ ಸಭಾ ನಾಯಕರನ್ನು ಕರೆದು ಅವರು ಸಮಾಲೋಚನೆ ನಡೆಸುವುದು ಒಳ್ಳೆಯದು’ ಎಂದರು.

‘ಯಾರ ಗೌರವಕ್ಕೂ ಧಕ್ಕೆ ತರಬಾರದು’

‘ಪ್ರಧಾನಿಯೇ ಇರಲಿ, ಇತರ ಯಾರೇ ಮುಖಂಡರು ಇರಲಿ, ಅವರ ಗೌರವಕ್ಕೆ ಧಕ್ಕೆ ತರುವಂಥ ಕೆಲಸ ಮಾಡಬಾರದು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮೋದಿಯವರ ತಲೆ ಇಲ್ಲದ ಭಾವಚಿತ್ರ ಹಾಕಿ ‘ಗಾಯಬ್’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ವಿಚಾರ ನನಗೆ ಗೊತ್ತಿಲ್ಲ. ಅವರಾಗಲಿ, ನಮ್ಮವರೇ ಆಗಲಿ ಈ ರೀತಿ ಮಾಡುವುದು ಸರಿಯಲ್ಲ’ ಎಂದರು.

ಪಹಲ್ಗಾಮ್ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿರುವ ಬಗ್ಗೆಪ್ರತಿಕ್ರಿಯಿಸಿದ ಅವರು, ‘ದೆಹಲಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ತೆಗೆದು ಕೊಂಡಿರುವ ನಿರ್ಣಯವನ್ನು ಎಲ್ಲರೂ ಪಾಲಿಸಬೇಕು. ಅದನ್ನು ಮತ್ತೊಮ್ಮೆ ಮನವರಿಕೆ ಮಾಡಿದ್ದೇವೆ. ಎಲ್ಲರೂ ಅದನ್ನು ಅನುಸರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.