ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

Published : 14 ಮಾರ್ಚ್ 2024, 16:35 IST
Last Updated : 14 ಮಾರ್ಚ್ 2024, 16:35 IST
ಫಾಲೋ ಮಾಡಿ
Comments

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.

ಚುನಾವಣೆ ಘೋಷಣೆ ಸಮೀಪದಲ್ಲಿರುವಾಗಲೇ ತೈಲ ಕಂಪನಿಗಳು ಬೆಲೆ ಕಡಿತದ ತಮ್ಮ ಎರಡು ವರ್ಷಗಳ ಬಿಗಿ ನಿಲುವನ್ನು ಸಡಿಲಿಸಿವೆ ಎಂದೆನ್ನಲಾಗಿದೆ.

ಈ ಪರಿಷ್ಕೃತ ಬೆಲೆಯು ಶುಕ್ರವಾರ (ಮಾರ್ಚ್ 15) ಬೆಳಿಗ್ಗೆ 6ರಿಂದ ಜಾರಿಗೆ ಬರಲಿವೆ ಎಂದು ಸಚಿವಾಲಯ ಗುರುವಾರ ಸಂಜೆ ಹೇಳಿದೆ.  ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹94.72 ಹಾಗೂ ಡೀಸೆಲ್ ಬೆಲೆ ₹87.62ರಷ್ಟಾಗಲಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT