ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ನಿಧಿಯಿಂದ ಫಲಾನುಭವಿ ರೈತರಿಗೆ ₹20 ಸಾವಿರ ಕೋಟಿಯನ್ನು ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡಲಿದ್ದಾರೆ.
ಜನವರಿ 1ರಂದು, 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಹಣ ವರ್ಗಾವಣೆಯಾಗಲಿದೆ. ರೈತರ ಖಾತೆಗೆ ಸೇರ್ಪಡೆಗೊಳ್ಳುತ್ತಿರುವ 10ನೇ ಕಂತು ಇದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಪ್ರಧಾನ ಮಂತ್ರಿಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ₹6,000 ಮೂರು ಕಂತುಗಳ ರೂಪದಲ್ಲಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ₹2,000 ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಪ್ರಧಾನಿ ಮೋದಿ ಸಾಮಾನ್ಯ ರೈತರ ಏಳ್ಗೆಗೆ ಹಣ ಬಿಡುಗಡೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಪಿಎಂಒ ಹೇಳಿದೆ.
PM Narendra Modi will release 10th instalment of financial benefit under PM-KISAN fund on January 1, transferring over Rs 20,000 crore to more than 10 crore beneficiary farmer families: PMO