ನವದೆಹಲಿ: ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಧ್ವನಿಯಾಗಲು ಬಯಸುತ್ತಿರುವ ಇಂಡಿಯನ್ ಸ್ಪೇಸ್ ಅಸೋಸಿಯೇಷನ್‌ಗೆ (ಐಎಸ್‌ಪಿಎ) ಇದೇ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ಇದೇ ಸಂದರ್ಭ ಅವರು ಬಾಹ್ಯಾಕಾಶ ಉದ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಶನಿವಾರ ತಿಳಿಸಿದೆ.

ಪ್ರಧಾನಮಂತ್ರಿಯವರ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತಾ, ಐಎಸ್‌ಪಿಎ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು, ತಾಂತ್ರಿಕವಾಗಿ ಮುಂದುವರಿಸಲು ಮತ್ತು ಪ್ರಮುಖ ಪಾಲುಗಾರನ್ನಾಗಿಸಲು ಕೈಜೋಡಿಸಲಿದೆ ಎಂದು ಅದು ಹೇಳಿದೆ.

ಐಎಸ್‌ಪಿಎ ಸಂಸ್ಥಾಪಕ ಸದಸ್ಯರಾಗಿ ಲಾರ್ಸನ್ ಮತ್ತು ಟೂಬ್ರೊ, ನೆಲ್ಕೋ (ಟಾಟಾ ಗ್ರೂಪ್), ಒನ್‌ವೆಬ್, ಭಾರತಿ ಏರ್‌ಟೆಲ್, ಮ್ಯಾಪ್‌ಮಿಂಡಿಯಾ, ವಾಲ್‌ಚಂದನಗರ್ ಇಂಡಸ್ಟ್ರೀಸ್, ಅನಂತ್ ಟೆಕ್ನಾಲಜಿ ಲಿಮಿಟೆಡ್ ಸೇರಿವೆ. ಪರಿಣತ ಸದಸ್ಯರಾಗಿ ಗೋದ್ರೆಜ್, ಹ್ಯೂಸ್ ಇಂಡಿಯಾ, ಅಜಿಸ್ಟಾ-ಬಿಎಸ್‌ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಕ್ಸರ್ ಇಂಡಿಯಾ ಸೇರಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.