ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಬಾಲಕಿಗೆ ಲೈಂಗಿಕ ಕಿರುಕುಳ; ಗುರುದ್ವಾರ ಮುಖ್ಯಸ್ಥನ ಬಂಧನ

Published 23 ಜುಲೈ 2023, 11:48 IST
Last Updated 23 ಜುಲೈ 2023, 11:48 IST
ಅಕ್ಷರ ಗಾತ್ರ

ಹೋಶಿಯಾರ್‌ಪುರ: ಪಂಜಾಬ್‌ನಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುರುದ್ವಾರ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜುಲೈ 20ರಂದು ಘಟನೆ ನಡೆದಿದೆ. ಬಾಲಕಿ ತನ್ನ ಗ್ರಾಮದ ಚಬ್ಬೇವಾಲ್ ಪ್ರದೇಶದಲ್ಲಿ ಗುರುದ್ವಾರಕ್ಕೆ ಹೋದಾಗ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಗಡಶಂಕರ್‌ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲ್ಕರ್ ಸಿಂಗ್ ಹೇಳಿದ್ದಾರೆ.

ಪ್ರಕರಣದಲ್ಲಿ 65 ವರ್ಷದ ಗುರುದ್ವಾರ ಮುಖ್ಯಸ್ಥ ಸಕತಾರ್ ಸಿಂಗ್‌ರನ್ನು ಬಂಧಿಸಲಾಗಿದೆ. ಆತ ಬಾಲಕಿಯನ್ನು ಕೋಣೆಗೆ ಕರೆಸಿಕೊಂಡು ಕಿರುಕುಳ ನೀಡಿದ್ದಾನೆ ಎಂದು ಡಿಎಸ್‌ಪಿ ಹೇಳಿದ್ದಾರೆ.

ಸಕತಾರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT