ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾರು ಇಚ್ಛಿಸುತ್ತಾರೆ. ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ ಇದು ಬಿಜೆಪಿಯ ಕಾರ್ಯಕ್ರಮ. ಇದರಲ್ಲಿ ಯಾವ ದೈವತ್ವವೂ ಇಲ್ಲ. ಬಿಜೆಪಿ ಕಾರ್ಯಕ್ರಮ ಮುಗಿದ ಬಳಿಕ ನಾವು ಅಯೋಧ್ಯೆಗೆ ಭೇಟಿ ನೀಡುತ್ತೇವೆ. ಅವರು ರಾಮನನ್ನು ಅಪಹರಿಸಿದ್ದಾರೆ ಎನ್ನುವಂತಿದೆ.
ಸಂಜಯ್ ರಾವುತ್, ಶಿವಸೇನಾ (ಉದ್ಧವ್ ಬಣ) ನಾಯಕ
ನಮಗೆ ಇದುವರೆಗೂ ಆಮಂತ್ರಣ ಬಂದಿಲ್ಲ. ಒಂದು ವೇಳೆ ಬಂದರೆ ಕಾರ್ಯಕ್ರಮಕ್ಕೆ ಹೋಗುತ್ತೇವೆ. ಇಲ್ಲವಾದಲ್ಲಿ ಉದ್ಘಾಟನೆಯಾದ ಬಳಿಕ ಒಂದು ದಿನ ಅಖಿಲೇಶ್ ಯಾದವ್ ಅವರು ಅಯೋಧ್ಯೆಗೆ ಹೋಗುತ್ತಾರೆ.
ಡಿಂಪಲ್ ಯಾದವ್, ಹಿರಿಯ ನಾಯಕಿ, ಎಸ್‌ಪಿ
ನನಗೆ ಇದುವರೆಗೂ ಆಮಂತ್ರಣ ಬಂದಿಲ್ಲ. ಒಂದು ವೇಳೆ ಆಮಂತ್ರಣ ಬಂದರೆ ಕಾರ್ಯಕ್ರಮಕ್ಕೆ ಹೋಗುತ್ತೇನೆ.
ಹೇಮಂತ್ ಸೊರೇನ್, ಜಾರ್ಖಂಡ್ ಮುಖ್ಯಮಂತ್ರಿ
ಬಿಜೆಪಿಯು ಕಾಂಗ್ರೆಸ್‌ಗೆ ಒಂದು ಸರಳ ಪ್ರಶ್ನೆಯನ್ನು ಕೇಳಬಯಸುತ್ತದೆ: ಮಾಕ್ಸ್‌ವಾದಿ ಪಕ್ಷ ಎಡರಂಗ ಪಕ್ಷಗಳು ಕೆಲವು ಧಾರ್ಮಿಕ ನಾಯಕರು ಒಡ್ಡಿರುವ ಬೆದರಿಕೆಗೆ ಕಾಂಗ್ರೆಸ್ ಬಗ್ಗುತ್ತದೆಯೇ?.