ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಪಟ್ಟಿ ಹೀಗಿದೆ

Published 19 ಜನವರಿ 2024, 11:47 IST
Last Updated 19 ಜನವರಿ 2024, 11:47 IST
ಅಕ್ಷರ ಗಾತ್ರ

ಅಯೊಧ್ಯೆ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದೇಶದಾದ್ಯಂತ ಸಾವಿರಾರು ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 

ಉದ್ಯಮಿಗಳು, ನಟ–ನಟಿಯರು, ರಾಜಕಾರಣಿಗಳು ಸೇರಿ 8 ಸಾವಿರ ಪ್ರಮುಖ ವ್ಯಕ್ತಿಗಳಿಗೆ ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಲಾಗಿದೆ. ದೇಶವೇ ಎದುರುನೋಡುತ್ತಿರುವ ಈ ಕಾರ್ಯಕ್ರಮಕ್ಕೆ ಯಾರನ್ನೆಲ್ಲಾ ಆಹ್ವಾನಿಸಲಾಗಿದೆ ಎನ್ನುವ ಪಟ್ಟಿ ಇಲ್ಲಿದೆ ನೋಡಿ.

ಸಿನಿಮಾ ಕ್ಷೇತ್ರದಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ರಜನಿ ಕಾಂತ್‌, ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌, ಅಲ್ಲು ಅರ್ಜುನ್‌. ಮೋಹನ್‌ಲಾಲ್‌, ಅನುಪಮ್‌ ಖೇರ್‌ ಅವರನ್ನು ಆಮಂತ್ರಿಸಲಾಗಿದೆ. ಜತೆಗೆ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್‌, ಗೀತರಚನೆಕಾರ ಮತ್ತು ಕವಿ ಮನೋಜ್ ಮುಂತಶಿರ್ ಅವರ ಕುಟುಂಬ, ಗೀತರಚನೆಕಾರ ಮತ್ತು ಬರಹಗಾರ ಪ್ರಸೂನ್ ಜೋಶಿ ಮತ್ತು ನಿರ್ದೇಶಕ ಸಂಜಯ್ ಬನ್ಸಾಲಿ ಮತ್ತು ಚಂದ್ರಪ್ರಕಾಶ್ ದ್ವಿವೇದಿ ಅವರನ್ನೂ ಆಹ್ವಾನಿಸಲಾಗಿದೆ.

ಬಿಲಿಯನರ್‌ಗಳಾದ ಮುಖೇಶ್‌ ಅಂಬಾನಿ ಹಾಗೂ ಅವರ ಕುಟುಂಬ, ಆದಿತ್ಯ ಬಿರ್ಲಾ ಗ್ರುಪ್‌ನ ಮುಖ್ಯಸ್ಥ ಕುಮಾರ್‌ ಮಂಗಲಮ್ ಹಾಗೂ ಅವರ ಕುಟುಂಬ, ಮಹಿಂದ್ರ ಮತ್ತು ಮಹಿಂದ್ರ ಆನಂದ್‌ ಸಂಸ್ಥೆಯ ಡಿಸಿಎಂ ಅಜಯ್‌ ಮಿಶ್ರಾ ಹಾಗೂ ಟಿಸಿಎಸ್‌ ಸಿಇಒ ಕೆ. ಕೃತಿ ವಾಸನ್‌ ಅವರನ್ನು ಆಹ್ವಾನಿಸಲಾಗಿದೆ.

ಡಾ. ರೆಡ್ಡಿ ಫಾರ್ಮಸ್ಯುಟಿಕಲ್ಸ್‌ನ ಕೆ.ಸತೀಶ್‌ ರೆಡ್ಡಿ, ಜೀ ಮಿಡಿಯಾದ ಸಿಇಒ ಪುನೀತ್‌ ಗೋಯಂಕಾ. ಎಲ್‌&ಟಿ ಸಿಇಒ ಎಸ್‌.ಎನ್‌ ಸುಬ್ರಮಣ್ಯನ್‌ ಕುಟುಂಬ, ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್‌ ನಾರಾಯಣ ಮೂರ್ತಿ, ಜಿಂದಾಲ್‌ ಸ್ಟೀಲ್‌ನ ಮುಖ್ಯಸ್ಥ ಸೇರಿ ಹಲವರಿಗೆ ಆಮಂತ್ರಣ ನೀಡಲಾಗಿದೆ.

ಇನ್ನು ರಾಜಕಾರಣಿಗಳ ಪಟ್ಟಿಯಲ್ಲಿ ಮಾಜಿ ಲೋಕಸಬಾ ಸ್ಪೀಕರ್‌ ಮೀರಾ ಕುಮಾರ್‌, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೂ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ಭಾರತದ ಜಿ20 ಶೆರ್ಪಾ ಅಮಿತಾಭ್‌ ಕಾಂತ್‌, ಮಾಜಿ ವಿದೇಶಾಂಗ ಸಚಿವ ಅಮರ್‌ ಸಿನ್ಹಾ, ಮಾಜಿ ಅಟಾರ್ನಿ ಜನರಲ್‌ ಕೆ. ಕೆ ವೇಣುಗೋಪಾಲ್‌ ಮತ್ತು ಮುಕುಲ್‌ ರೋಹಟಗಿ, ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಸೇರಿ ಹಲವರನ್ನು ಆಹ್ವಾನಿಸಲಾಗಿದೆ.

ಇನ್ನೂ ಹಲವು ಮುಖ್ಯ ಗಣ್ಯರಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ಆರ್ ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT