ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ

Published 24 ಮೇ 2024, 9:48 IST
Last Updated 24 ಮೇ 2024, 9:48 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್‌ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಖೈರ್ಥಲ್‌ ಜಿಲ್ಲೆಯಲ್ಲಿ ಗುರುವಾರ ಬಿಸಿಲಾಘಾತಕ್ಕೆ ಐವರು ಮೃತಪಟ್ಟಿದ್ದಾರೆ. ಬಿಸಿಗಾಳಿಯ ಹೊಡೆತಕ್ಕೆ ಐದು ನವಿಲು ಮೃತಪಟ್ಟಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜಸ್ಥಾನದ ಹವಾಮಾನದ ಕುರಿತು ಮಾಹಿತಿ ನೀಡಿರುವ ಐಎಂಡಿಯ ವಿಜ್ಞಾನಿ ನರೇಶ್‌ ಕುಮಾರ್‌, ‘ರಾಜಸ್ಥಾನ, ಹರಿಯಾಣದಲ್ಲಿ ರೆಡ್‌ ಅಲರ್ಟ್‌ ಮತ್ತು ಪಂಜಾಬ್‌ನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದೆಹಲಿ–ಎನ್‌ಸಿಆರ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ತಾಪಮಾನ ತುಸು ಕುಸಿತ ಕಂಡಿದೆ. ಆದರೂ ಕೆಲವು ದಿನ 43–44 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಅಂದಾಜಿಸಿದ್ದೇವೆ. ಹೀಗಾಗಿ ಜನರು ಎಚ್ಚರಿಕೆವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT