ಪತ್ತನಂತಿಟ್ಟ (ಕೇರಳ): ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಆರಂಭಿಸಿದ್ದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
.ಶಬರಿಮಲೆ ದರ್ಶನ: ಸ್ಥಳದಲ್ಲಿ ಬುಕಿಂಗ್ ಮಾಡಲು ದಿನಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ.
ಅಪಘಾತ, ಕೆಟ್ಟುಹೋದ ಅಥವಾ ಇನ್ನಿತರ ಯಾವುದೇ ತುರ್ತು ಸಂದರ್ಭದಲ್ಲಿ ಪತ್ತನಂತಿಟ್ಟ, ಕೋಟಯಂ ಹಾಗೂ ಇಡುಕ್ಕಿ ಜಿಲ್ಲೆಗಳ ರಸ್ತೆಯಲ್ಲಿ ಪ್ರಯಾಣಿಸುವಾಗ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಎಂವಿಡಿ ಹೇಳಿದೆ. ಇದಕ್ಕಾಗಿ ‘ಶಬರಿಮಲೆ ಸೇಫ್ ಝೋನ್ ಸಹಾಯವಾಣಿ’ಯನ್ನು ಆರಂಭಿಸಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಎಳವುಂಕಲ್, ಎರುಮೇಲಿ ಹಾಗೂ ಕುಟ್ಟಿಕಾನಂನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಸಮಯದಲ್ಲಿ ತುರ್ತು ಸಹಾಯ ಪಡೆಯಬಹುದಾಗಿದೆ. ಕೆಟ್ಟು ಹೋದರೆ, ಕ್ರೇನ್ ಅಗತ್ಯ ಇದ್ದರೆ, ಆ್ಯಂಬುಲೆನ್ಸ್ ಸೇವೆ ಹಾಗೂ ಪ್ರಮುಖ ವಾಹನ ತಯಾರಕರಿಂದ ಸೇವೆಗಳು ಲಭ್ಯವಿರಲಿದೆ ಎಂದು ಎಂವಿಡಿ ಹೇಳಿದೆ.
.ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ .
ಶಬರಿಮಲೆಗೆ ಬರುವ ಯಾತ್ರಿಗಳಿಗೆ ಅಪಘಾತ ರಹಿತ ಸುರಕ್ಷಿತ ತೀರ್ಥಯಾತ್ರೆ ಅನುಭಯ ನೀಡಲು ಈ ಉಪಕ್ರಮ ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬರಿಮಲೆ ಸೇಫ್ ಝೋನ್ ಸಹಾಯವಾಣಿ

ಎಳವುಂಕಲ್: 9400044991, 9562318181

ಎರುಮೇಲಿ: 9496367974, 8547639173

ಕುಟ್ಟಿಕಾನಂ: 9446037100, 8547639176

ಯಾವುದೇ ವಿಚಾರಣೆಗೆ safezonesabarimala@gmail.com ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು.
.Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್ ತರಾಟೆ