ತಿರುವನಂತಪುರ: ‘ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದ ಕರಾಳ ಅಧ್ಯಾಯ ಎಂದುಕೊಳ್ಳುವ ಬದಲು, ಅದು ಕಲಿಸಿದ ಪಾಠವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಮಲಯಾಳ ಪತ್ರಿಕೆ ದೀಪಿಕಾಗೆ ಬರೆದಿರುವ ಅಂಕಣದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

‘ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕರಾಳ ಯುಗ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೈಗೊಂಡ ಪ್ರಯತ್ನಗಳು ಕ್ರೌರ್ಯದ ರೂಪ ತಾಳಿತು. ಹಾಗೆಂದು ಆ ಕ್ರಮವನ್ನು ಸಮರ್ಥಿಸಲಾಗದು’ ಎಂದು ಅವರು ಹೇಳಿದ್ದಾರೆ.

‘ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು ಈ ಅವಧಿಯ ಕುಕೃತ್ಯಕ್ಕೆ ಒಂದು ಉದಾಹರಣೆ. ಸಂಜಯ್ ಇಟ್ಟ ಅನಿಯಂತ್ರಿತ ಗುರಿಯನ್ನು ತಲುಪಲು ಬಡ ಗ್ರಾಮೀಣ ಭಾಗದಲ್ಲಿ ಹಿಂಸೆ ಮತ್ತು ಬಲವಂತದಿಂದ ಸಂತಾನಹರಣ ಮಾಡಿಸಲಾಗುತ್ತಿತ್ತು. ನವದೆಹಲಿ ಹಾಗೂ ಇನ್ನಿತರ ನಗರಗಳ ಕೊಳಗೇರಿಗಳನ್ನು ಕರುಣೆಯೇ ಇಲ್ಲದೆ ನೆಲಸಮಗೊಳಿಸಲಾಯಿತು. ಸಾವಿರಾರು ಜನರು ನಿರ್ವಸತಿಗರಾದರು. ಅವರ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ’ ಎಂದು ತರೂರ್ ಹೇಳಿದ್ದಾರೆ.

‘ಪ್ರಜಾಪ್ರಭುತ್ವ ಎನ್ನುವುದು ಲಘುವಾಗಿ ಪರಿಗಣಿಸುವಂತದ್ದಲ್ಲ. ಅದು ಅಮೂಲ್ಯವಾದ ಪರಂಪರೆಯಾಗಿದ್ದು, ಅದನ್ನು ನಿರಂತರವಾಗಿ ಪೋಷಿಸಿ, ಸಂರಕ್ಷಿಸಿಡಬೇಕು. ಜನರು ಎಲ್ಲೇ ಇರಲಿ ಇದು ಅವರ ಕೊನೆಯವರೆಗೂ ನೆನಪಿರಬೇಕು. ಇಂದಿನ ಭಾರತ 1975ರ ಭಾರತವಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಆತ್ಮವಿಶ್ವಾಸ ಇಂದು ಹೆಚ್ಚಾಗಿದೆ. ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಪ್ರಜಾಪ್ರಭತ್ವ ಇನ್ನಷ್ಟು ಬಲಶಾಲಿಯಾಗಿದೆ. ಹೀಗಿದ್ದರೂ, ಕಠಿಣ ಹಾದಿಯಲ್ಲಿ ಇಂದಿಗೂ ಅಂದಿನ ತುರ್ತು ಪರಿಸ್ಥಿತಿ ಕಲಿಸಿದ ಪಾಠವನ್ನು ನೆನಪಿಸುತ್ತದೆ’ ಎಂದಿದ್ದಾರೆ.

‘ಅಧಿಕಾರ ಕೇಂದ್ರೀಕರಣ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವುದು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು, ವಾಮಮಾರ್ಗ ಅನುಸರಿಸುವುದು ಬೇರೆ ರೂಪದಲ್ಲಿ ಮತ್ತೆ ಬರುವ ಅಪಾಯಗಳಿವೆ. ರಾಷ್ಟ್ರದ ಹಿತಾಸಕ್ತಿ ಅಥವಾ ಸ್ಥಿರತೆಯ ಹೆಸರಿನಲ್ಲಿ ಇಂಥ ಪ್ರವೃತ್ತಿಗಳು ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಇಂಥ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ನಮಗೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ಪ್ರಜಾಪ್ರಭುತ್ವದ ಕಾವಲುಗಾರರು ಸದಾ ಜಾಗೃತರಾಗಿರಬೇಕು’ ಎಂದು ಶಶಿ ತರೂರ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.