ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ 2023ರ ನಾರಿ ಶಕ್ತಿ ವಂದನಾ ಕಾಯ್ದೆಯಲ್ಲಿ ಬರುವ ಕ್ಷೇತ್ರಗಳ ಮರು ವಿಂಗಡಣೆ ನಿಯಮದ ಕುರಿತಂತೆ ಪರಿಶೀಲನೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸಂವಿಧಾನದ ಪರಿಚ್ಛೇದ 32ರ ಅಡಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ(ಎನ್ಎಫ್ಐಡಬ್ಲ್ಯು) ಮತ್ತು ಜಯಾ ಠಾಕೂರ್ ಸಲ್ಲಿಸಿದ್ದ ಮನವಿಗಳ ವಿಚಾರಣೆಗೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಿ.ಬಿ. ವರಾಳೆ ನೇತೃತ್ವದ ಪೀಠ ನಿರಾಕರಿಸಿದೆ.

ಜಯಾ ಠಾಕೂರ್ ಅವರು ಕಾಯ್ದೆಯ ಜಾರಿಯನ್ನೇ ಪ್ರಶ್ನಿಸಿದ್ದರೆ, ಎನ್ಎಫ್ಐಡಬ್ಲ್ಯು, ಕಾಯ್ದೆಯ ಮರುಹಂಚಿಕೆಯ ನಿಯಮಗಳನ್ನು ಪ್ರಶ್ನಿಸಿತ್ತು.

ಠಾಕೂರ್ ಅವರ ಮನವಿಯನ್ನು ನಿರುಪಯುಕ್ತವೆಂದು ತಳ್ಳಿಹಾಕಿದ ನ್ಯಾಯಾಲಯವು, ಪರಿಚ್ಛೇದ 32ರ ಅಡಿಯಲ್ಲಿ ಎನ್ಎಫ್ಐಡಬ್ಲ್ಯು ಮನವಿಯನ್ನು ಪರಿಶೀಲಿಸಲು ಒಲವು ತೋರಲಿಲ್ಲ. ಈ ಸಂಬಂಧ ಅರ್ಜಿದಾರರು ಹೈಕೋರ್ಟ್ ಅಥವಾ ಯಾವುದೇ ಸೂಕ್ತ ವೇದಿಕೆಗೆ ಹೋಗಬಹುದು ಎಂದು ಪೀಠ ಹೇಳಿದೆ.

ಆರ್ಟಿಕಲ್ 334 ಎ (1) ಅಥವಾ 2023ರ ಕಾಯಿದೆಯ ಷರತ್ತು 5ರ ಸಾಂವಿಧಾನಿಕ ಸಿಂಧುತ್ವವನ್ನು ಎನ್ಎಫ್ಐಡಬ್ಲ್ಯು ಪ್ರಶ್ನಿಸಿತ್ತು.

2023ರ ನವೆಂಬರ್ 3ರಂದು ಜಯಾ ಠಾಕೂರ್ ಅವರ ಮನವಿಯನ್ನು ಆಲಿಸಿದ್ದ ನ್ಯಾಯಾಲಯವು, ಜನಗಣತಿಯ ನಂತರ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿ ಕಾನೂನಿನ ಒಂದು ಭಾಗವನ್ನು ನ್ಯಾಯಾಲಯವು ರದ್ದುಗೊಳಿಸುವುದು ಬಹಳ ಕಷ್ಟ ಎಂದು ಹೇಳಿತ್ತು.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ 2023ರ ನಾರಿ ಶಕ್ತಿ ವಂದನಾ ಮಸೂದೆಗೆ 2023ರ ಸೆಪ್ಟೆಂಬರ್ 21ರಂದು ಸಂಸತ್ತಿನ ಅಂಗೀಕಾರ ಪಡೆದಿತ್ತು. ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸರ್ವಾನುಮತದಿಂದ ಅಂಗೀಕಾರ ಸಿಕ್ಕಿತ್ತು.

ಕಾಯ್ದೆಯು ಜಾರಿಗೆ ಬರಬೇಕು ಎಂದಾದರೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗಬೇಕು ಎಂದು ಕಾಯ್ದೆಯ 5ನೆಯ ಖಂಡದಲ್ಲಿ ಹೇಳಲಾಗಿದೆ. ಈ ಅಂಶವನ್ನು ಎನ್ಎಫ್ಐಡಬ್ಲ್ಯು ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.