ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸೀನ್‌ ಮಲ್ಲಿಕ್‌ಗೆ ಶಿಕ್ಷೆ: ಶ್ರೀನಗರದ ಅಲ್ಲಲ್ಲಿ ಪ್ರತಿಭಟನೆ

ಯಾಸಿನ್ ಬೆಂಬಲಿಗರು, ಭದ್ರತಾಪಡೆಗಳ ನಡುವೆ ಸಂಘರ್ಷ
Last Updated 25 ಮೇ 2022, 19:11 IST
ಅಕ್ಷರ ಗಾತ್ರ

ಶ್ರೀನಗರ: ನಿಷೇಧಿತ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್ ಮಲಿಕ್ ಬೆಂಬಲಿಗರು, ಭದ್ರತಾಪಡೆಗಳ ನಡುವೆ ಶ್ರೀನಗರದಲ್ಲಿ ಬುಧವಾರ ಘರ್ಷಣೆ ನಡೆಯಿತು. ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಇದ್ದ ಸಮಯದಲ್ಲಿ ಮೈಸುಮಾ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿತು.

ಲಾಲ್‌ ಚೌಕ್ ಸಮೀಪದ ಮೈಸುಮಾದಲ್ಲಿ ಇರುವ ಮಲಿಕ್ ನಿವಾಸದ ಬಳಿ ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಮಲಿಕ್ ಪರವಾಗಿ ಘೋಷಣೆಗಳನ್ನು ಕೂಗಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ಇಡೀ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸುಮಾ ಚೌಕ್‌ ಕಡೆಗೆ ಮೆರವಣಿಗೆ ನಡೆಸಲು ಮುಂದಾದಾಗ, ಭದ್ರತಾ ಪಡೆಗಳ ಜೊತೆ ಸಂಘರ್ಷ ನಡೆಯಿತು.

ಯಾಸಿನ್ ಮಲಿಕ್ ಶಿಕ್ಷೆ ವಿವರ
* ಯುದ್ಧಕ್ಕೆ ಯತ್ನ (ಐಪಿಸಿ ಸೆ. 121): ಜೀವಾವಧಿ ಶಿಕ್ಷೆ (₹10 ಸಾವಿರ ದಂಡ)
* ಭಯೋತ್ಪಾದಕ ಚಟುವಟಿಕೆಗೆ ಹಣ ಸಂಗ್ರಹ (ಯುಎಪಿಎ ಸೆ. 17): ಜೀವಾವಧಿ ಶಿಕ್ಷೆ (₹10 ಲಕ್ಷ ದಂಡ)
* ಕ್ರಿಮಿನಲ್ ಸಂಚು (ಐಪಿಸಿ 120 ಬಿ): 10 ವರ್ಷ ಜೈಲು (₹10 ಸಾವಿರ ದಂಡ)
* ಯುದ್ಧ ನಡೆಸಲು ಸಂಚು (ಐಪಿಸಿ ಸೆ. 121ಎ): 10 ವರ್ಷ ಜೈಲು (₹10 ಸಾವಿರ ದಂಡ)
* ಕಾನೂನು ಬಾಹಿರ ಚಟುವಟಿಕೆ (ಯುಎಪಿಎ ಸೆ. 13): 5 ವರ್ಷ ಜೈಲು (₹5 ಸಾವಿರ ದಂಡ)
* ಭಯೋತ್ಪಾದನಾ ಕೃತ್ಯ (ಯುಎಪಿಎ ಸೆ.16/ ಐಪಿಸಿ ಸೆ.120ಬಿ): 10 ವರ್ಷ ಜೈಲು (₹10 ಸಾವಿರ ದಂಡ)
* ಸಂಚು (ಯುಎಪಿಎ ಸೆ. 18): 10 ವರ್ಷ ಜೈಲು (₹10 ಸಾವಿರ ದಂಡ)
* ಭಯೋತ್ಪಾದನಾ ಗುಂಪಿನ ಸದಸ್ಯ (ಯುಎಪಿಎ ಸೆ.20): 10 ವರ್ಷ ಜೈಲು (₹10 ಸಾವಿರ ದಂಡ)
* ಭಯೋತ್ಪಾದನಾ ಗುಂಪಿನ ಸದಸ್ಯನಿಗೆ ಶಿಕ್ಷೆ (ಯುಎಪಿಎ ಸೆ.38): 5 ವರ್ಷ ಜೈಲು (₹5 ಸಾವಿರ ದಂಡ)
* ಭಯೋತ್ಪಾದನಾ ಸಂಘಟನೆಗೆ ಬೆಂಬಲ (ಯುಎಪಿಎ ಸೆ.39): 5 ವರ್ಷ ಜೈಲು (₹5 ಸಾವಿರ ದಂಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT