ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ಎಸ್‌ಐಆರ್‌ ಆಘಾತಕಾರಿ ಘಟ್ಟ ತಲುಪಿದೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಮತಾ

Published : 20 ನವೆಂಬರ್ 2025, 15:47 IST
Last Updated : 20 ನವೆಂಬರ್ 2025, 15:47 IST
ಫಾಲೋ ಮಾಡಿ
Comments
ಇದು ಅವರ (ಮಮತಾ) ಹತಾಶೆಯನ್ನು ತೋರಿಸುತ್ತದೆ. ತಮ್ಮನ್ನು ಅಧಿಕಾರಕ್ಕೆ ತರುವವರನ್ನು ರಕ್ಷಿಸಲು ಮತದಾರರ ಪಟ್ಟಿಯನ್ನು ಸ್ವಚ್ಛ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಯತ್ನಿಸುತ್ತಿದ್ದಾರೆ
ಪ್ರದೀಪ್ ಭಂಡಾರಿ ಬಿಜೆಪಿಯ ರಾಷ್ಟ್ರೀಯ ವಕ್ತಾರ
ಇಲ್ಲದ ದಾಖಲೆ: ವೃದ್ಧ ಆತ್ಮಹತ್ಯೆಗೆ ಯತ್ನ
‘2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಸುದ್ದಿ ತಿಳಿದ ಬಳಿಕ ಭಯಭೀತಗೊಂಡ 63 ವರ್ಷದ ಅಶೋಕ್‌ ಸರ್ದಾರ್‌ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ವೃದ್ಧರನ್ನು ಆರ್‌ಜಿ ಕರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂದು ಕಾಲನ್ನು ಕತ್ತರಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದರು. ‘ವಿಷಯ ಗೊತ್ತಾದ ದಿನದಿಂದ ಅವರು ಭಯಗೊಂಡಿದ್ದರು. ‘ನನ್ನ ಬಳಿ ದಾಖಲೆಗಳು ಇಲ್ಲ. ನನ್ನನ್ನು ದೇಶದಿಂದ ಹೊರಹಾಕಬಹುದು’ ಎಂದು ಭಯಗೊಂಡ ಕಾರಣದಿಂದಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕುಟುಂಬ ಆರೋಪಿಸುತ್ತಿದೆ’ ಎಂದು ತಿಳಿಸಿದರು. ಸರ್ದಾರ್‌ ಅವರು ಸೈಕಲ್‌ ರಿಕ್ಷಾ ಚಾಲಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT