ಗಡಿ ಸಮೀಪ ಭದ್ರತಾ ಪಡೆಯ ಯೋಧನೊಬ್ಬ ಆತನ ತಪಾಸಣೆ ನಡೆಸಿದ್ದು, ಈ ವೇಳೆ ಡ್ಯಾಗರ್‌ನಿಂದ ದಾಳಿ ಮಾಡಿದ್ದಾನೆ ಎಂದು ಗೊತ್ತಾಗಿದೆ.
32ನೇ ಬೆಟಾಲಿಯನ್‌ಗೆ ಸೇರಿದ ಯೋಧನ ಸಮವಸ್ತ್ರ, ದಾಳಿಯಿಂದಾಗಿ ಭುಜದ ಬಳಿ ಹರಿದಿದೆ. ಕೂಡಲೆ ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದರೂ, ದಾಳಿಕೋರ ತಪ್ಪಿಸಿಕೊಂಡಿದ್ದಾನೆ.
ಸಮೀಪದಲ್ಲೇ ಹಲವು ರೈತರು ಕೆಲಸ ಮಾಡುತ್ತಿದ್ದರಿಂದ ಯೋಧ ಹೆಚ್ಚಿನ ಗುಂಡು ಹಾರಿಸಲಿಲ್ಲ. ವಶಪಡಿಸಿಕೊಂಡ ಚಿನ್ನವನ್ನು ಕಂದಾಯ ಗುಪ್ತಚರ ಪಡೆಯ ನಿರ್ದೇಶಕರಿಗೆ ಬಿ.ಎಸ್.ಎಫ್ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.