ಕೊಯಮತ್ತೂರು: ದುಬೈ ಏರ್ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್ ಸ್ಯಾಲ್ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ.

ದುಬೈ ಏರ್ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್ಸಿಎ) 'ತೇಜಸ್' ಯುದ್ಧ ವಿಮಾನ ಶುಕ್ರವಾರ (ನ.21) ಪತನಗೊಂಡಿತ್ತು.

ತಮಿಳುನಾಡಿನ ಕೊಯಮತ್ತೂರಿನ ಸೂಲೂರು ವಾಯುನೆಲೆಗೆ ನಮಾಂಶ್ ಪಾರ್ಥೀವ ಶರೀರವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯಿಂದ ಗೌರವ ನಮನ ಸಲ್ಲಿಸಲಾಯಿತು.

ಕೊಯಮತ್ತೂರಿನ ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗರಿಯಪ್ಪನವರ್ ವಾಯುಪಡೆಯ ನೆಲೆಯಲ್ಲಿ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.

ವಿಮಾನ ಪತನಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.

ಸೂಲೂರು ನೆಲೆಯು ಭಾರತೀಯ ವಾಯುಪಡೆಯ ದಕ್ಷಿಣ ಕಮಾಂಡ್ ನಿರ್ವಹಣೆಯಲ್ಲಿದೆ.
.ದುಬೈ ಏರ್ಶೋ: ದುಬೈ ಏರ್ಶೋನಲ್ಲಿ ತೇಜಸ್ ಪತನ: ಪೈಲಟ್ ಸಾವು.ಹಿಮಾಚಲದಿಂದ ದುಬೈ ದುರಂತದವರೆಗೆ: ತೇಜಸ್ ಪತನದಲ್ಲಿ ಮೃತರಾದ ಪೈಲಟ್ ಯಾರು ಗೊತ್ತೆ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.