ನವದೆಹಲಿ: ‘ಕಳೆದ ದಶಕದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಇದು ಐತಿಹಾಸಿಕ ಪರಿವರ್ತನೆಯಾಗಿದೆ. ಭಾರತದಲ್ಲಿ ಬುಲೆಟ್ ರೈಲು ಸಂಚರಿಸುವ ಸಮಯ ದೂರ ಉಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭರವಸೆ ನೀಡಿದ್ದಾರೆ.

ಜಮ್ಮು ಸೇರಿದಂತೆ ದೇಶದ ವಿವಿಧ ರೈಲು ಯೋಜನೆಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
.ರಾಜ್ಯದಲ್ಲಿ HMP ವೈರಾಣು ಸೋಂಕು ಪತ್ತೆ ಪ್ರಕರಣ; ಮುಂಜಾಗ್ರತೆಗೆ CM ಸೂಚನೆ.ರಾಮನಗರ DC ಕಚೇರಿ ಬಳಿ ಪ್ರತಿಭಟನೆಗೆ ನಿಷೇಧಾಜ್ಞೆ: ರೈತ ಸಂಘದಿಂದ ಮೆರವಣಿಗೆ.
ದೇಶದಲ್ಲಿ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸುವ ಮೂಲಕ ಭಾರತದ ಉದ್ದಗಲಕ್ಕೂ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಆ ಮೂಲಕ ಉದ್ಯೋಗವಾಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಜನರು ದೂರ ಪ್ರಯಾಣ ಮಾಡಲು ಕಡಿಮೆ ಸಮಯವಾಗುವ ಸಂಚಾರ ವ್ಯವಸ್ಥೆಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಈಗಾಗಲೇ 150ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು 50ಕ್ಕೂ ಹೆಚ್ಚು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ದೇಶದಲ್ಲಿ ಬುಲೆಟ್ ರೈಲುಗಳ ಓಡಾಡುವ ಸಮಯ ದೂರವಿಲ್ಲ. ಶೀಘ್ರದಲ್ಲಿ ಬುಲೆಟ್ ರೈಲುಗಳು ಭಾರತದಲ್ಲಿ ಸಂಚರಿಸಲಿವೆ ಎಂದೂ ಮೋದಿ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿಯೇ ಅನೇಕ ರೈಲು ಯೋಜನೆಗಳು ಅನಾವರಣಗೊಂಡಿದೆ. ಕಳೆದ ದಶಕಕ್ಕಿಂತ ಸಂಚಾರ ವ್ಯವಸ್ಥೆ ಅಧಿಕ ವೇಗ ಪಡೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.
.ದೆಹಲಿ: ಮಹಿಳೆಯರಿಗೆ ತಿಂಗಳಿಗೆ ₹2,500; ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿಕೆಶಿ.ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ: ಗೋವಾದಿಂದ ಬರುತ್ತಿದ್ದ ಇಬ್ಬರು ಯುವಕರ ಸಾವು.ಯಶ್ ಜನ್ಮದಿನದ ಪ್ರಯುಕ್ತ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆ?.ಜಾರ್ಖಂಡ್: 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.