ಗೋರಖಪುರ: ಉತ್ತರ ಪ್ರದೇಶದ ಗೋರಖಪುರದಲ್ಲಿ ಮಹಿಳೆಯೊಬ್ಬರು ಮದುವೆಯಾದ ಮೂರೇ ದಿನದಲ್ಲಿ ಪತಿಯಿಂದ ವಿಚ್ಛೇದನ ಪಡೆಯಲು ಅನುಮತಿ ಕೋರಿದ್ದಾರೆ.

ಮದುವೆಯಾದ ಮೊದಲ ರಾತ್ರಿಯಲ್ಲಿ ದೈಹಿಕವಾಗಿ ಸಂಬಂಧ ಹೊಂದಲು ಪತಿ ಸಮರ್ಥರಾಗಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಪತಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
.ಬರೋಡಾ ರಾಣಿಗೆ ನೆಹರು ಕಾಯ್ದಿರಿಸಿದ್ದ Rolls-Royceಗಾಗಿ ಜಟಾಪಟಿ: SC ವಿಚ್ಛೇದನ .
ಪೊಲೀಸರ ಪ್ರಕಾರ, ನವವಿವಾಹಿತೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ವರ ಅಪ್ಪನಾಗಲು ಸಾಧ್ಯವಿಲ್ಲ ಎಂದು ವೈದ್ಯಕೀಯ ವರದಿಯು ದೃಢಪಡಿಸಿದೆ ಎಂದು ಆಕೆಯ ಕುಟುಂಬವು ಹೇಳಿಕೊಂಡಿದೆ.

ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿಯೊಂದಿಗೆ ನನ್ನ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ. ಮದುವೆಯ ರಾತ್ರಿ ಪತಿ ಈ ವಿಚಾರ ಹೇಳಿದಾಗ ನನಗೆ ಇದರ ಬಗ್ಗೆ ತಿಳಿಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.

25 ವರ್ಷದ ವರ ಗೋರಖಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 28ರಂದು ಮದುವೆ ನೆರವೇರಿತ್ತು.
.ನಟ ಗೋವಿಂದ–ಸುನೀತಾ ವಿಚ್ಛೇದನ ಮತ್ತೆ ಮುನ್ನೆಲೆಗೆ: ಮ್ಯಾನೇಜರ್ ಹೇಳಿದ್ದೇನು?.
ಮದುವೆಗೂ ಮುನ್ನ ವರನ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿರಲಿಲ್ಲ ಎಂದು ಮಧುವಿನ ಕುಟುಂಬದವರು ಆರೋಪಿಸಿದ್ದಾರೆ. ಇದು ಆತನ ಎರಡನೇ ಮದುವೆಯಾಗಿದ್ದು, ಎರಡು ವರ್ಷಗಳ ಹಿಂದೆ ಇದೇ ಕಾರಣಕ್ಕಾಗಿ ಮೊದಲ ಹೆಂಡತಿ ಬಿಟ್ಟು ಹೋಗಿದ್ದಳು ಎಂದು ಹೇಳಿದ್ದಾರೆ.

ಎರಡೂ ಕಡೆಯವರ ಸಮ್ಮತಿಯೊಂದಿಗೆ ವರನ ವೈದ್ಯಕೀಯ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ತಂದೆಯಾಗಲು ಸಾಧ್ಯವಿಲ್ಲ ಎಂಬುದು ದೃಢಪಟ್ಟಿದೆ ಎಂದು ಹೇಳಲಾಗಿದೆ.

ಪೊಲೀಸರ ಮಧ್ಯ ಪ್ರವೇಶದೊಂದಿಗೆ ವಧುವಿನ ಮದುವೆ ಖರ್ಚು ಹಾಗೂ ಉಡುಗೊರೆಗಳನ್ನು ಒಂದು ತಿಂಗಳೊಳಗೆ ಹಿಂದಿರುಗಿಸಲು ವರನ ಕಡೆಯವರು ಒಪ್ಪಿಕೊಂಡಿದ್ದಾರೆ.
.Divorce | ಪತ್ನಿಗೆ ವಿಚ್ಛೇದನ ಕೊಟ್ಟು ಹಾಲಿನಲ್ಲಿ ಸ್ನಾನಮಾಡಿ ಸಂಭ್ರಮಿಸಿದ ಪತಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.