ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆ ಬಿಟ್ಟು ಹೋದ ಹೆಂಡತಿಯನ್ನು ವಾಪಸ್ ಕರೆದಿದ್ದಕ್ಕೆ ತಾಯಿಯನ್ನೇ ಕೊಂದ ಕುಡುಕ ಮಗ

ಉತ್ತರ ಪ್ರದೇಶ
Last Updated 17 ಜುಲೈ 2022, 14:07 IST
ಅಕ್ಷರ ಗಾತ್ರ

ಸಂತ ಕಬೀರ್ ನಗರ್ (ಉತ್ತರ ಪ್ರದೇಶ): ಜಿಲ್ಲೆಯ ಮೆಹ್ದವಾಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಎಕ್ಲಾ ಶುಕ್ಲಾ ಹಳ್ಳಿಯಲ್ಲಿ 32 ವರ್ಷದ ಮಗನೊಬ್ಬ ತನ್ನ ವೃದ್ಧ ತಾಯಿಯ ಕತ್ತು ಸೀಳಿ ಹತ್ಯೆ ಮಾಡಿರುವ ಬೀಕರ ಕೃತ್ಯ ಭಾನುವಾರ ವರದಿಯಾಗಿದೆ.

70 ವರ್ಷದ ವಿಮಲಾ ದೇವಿ ಹತ್ಯೆಯಾದವರು. ಈ ಸಂಬಂಧ ಅವರ ಮಗ ಪ್ರಮೋದ್‌ ಶುಕ್ಲಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಸೋನಮ್‌ ಕುಮಾರ್‌ ಹೇಳಿದ್ದಾರೆ.

ಆರೋಪಿಯು ಮದ್ಯ ವ್ಯಸನಿಯಾಗಿದ್ದು,ಇದೇ ಕಾರಣಕ್ಕೆ ಆತನ ಪತ್ನಿಯೂ ಮನೆ ಬಿಟ್ಟು ಹೋಗಿದ್ದಾರೆ. ಆದರೆ, ಮನೆಗೆ ವಾಪಸ್‌ ಬರುವಂತೆ ಸೊಸೆಯನ್ನು (ಪ್ರಮೋದ್‌ ಪತ್ನಿಯನ್ನು) ವಿಮಲಾ ದೇವಿ ಕರೆದಿದ್ದರು. ಹೀಗಾಗಿ, ಅವರೊಂದಿಗೆ (ತಾಯಿಯೊಂದಿಗೆ) ಜಗಳ ಮಾಡಿದ್ದ ಆರೋಪಿ, ಕೋಪದಲ್ಲಿ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ವಿಮಲಾ ದೇವಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT