ಬೆಂಗಳೂರು: ಪದವಿಪೂರ್ವ ಕಾಲೇಜುಗಳಿಗೆ (ಪಿಯುಸಿ) ಇನ್ನು ಮುಂದೆ ನೇಮಕವಾಗುವ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಪಾಠ ಮಾಡುವುದು ಕಡ್ಡಾಯವಾಗಲಿದೆ.

ಪ್ರಸ್ತುತ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣಕ್ಕೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳಿವೆ. ಶಾಲಾ ಶಿಕ್ಷಣ ಇಲಾಖೆಯ ಆಯಾ ಜಿಲ್ಲೆಯ ಉಪ ನಿರ್ದೇಶಕರು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರವಾಗಿದ್ದಾರೆ. ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯವು ಪದವಿಪೂರ್ವ ಶಿಕ್ಷಕರ ನೇಮಕಾತಿ ಪ್ರಾಧಿಕಾರವಾಗಿದೆ. ಪ್ರೌಢಶಾಲಾ ಶಿಕ್ಷಕರು 8ರಿಂದ 10ನೇ ತರಗತಿಯವರೆಗೆ, ಉಪನ್ಯಾಸಕರು ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾ ಬಂದಿದ್ದಾರೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಪರಿಕಲ್ಪನೆ ಅನುಷ್ಠಾನಗೊಂಡ ನಂತರ ಅವರು 6, 7ನೇ ತರಗತಿಯ ಜತೆಗೆ 8ನೇ ತರಗತಿಯ ಮಕ್ಕಳಿಗೂ ಬೋಧಿಸುವ ಅವಕಾಶ ಪಡೆದಿದ್ದಾರೆ.

ಪ್ರೌಢಶಾಲೆಗಳನ್ನು ಒಳಗೊಂಡ ಪದವಿಪೂರ್ವ ಕಾಲೇಜುಗಳಲ್ಲಿ ಆಡಳಿತಾತ್ಮಕವಾಗಿ ಅಲ್ಲಿನ ಪ್ರಾಂಶುಪಾಲರು ಮುಖ್ಯಸ್ಥರಾದರೆ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರು ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಶಿಕ್ಷಕರು–ಉಪನ್ಯಾಸಕರ ಬೋಧನಾ ಕಾರ್ಯಗಳಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ.

ರಾಜ್ಯದಲ್ಲಿನ ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಲೆಗಳಲ್ಲಿ ಪ್ರೌಢಶಾಲೆಯ ವ್ಯಾಪ್ತಿ 12ನೇ ತರಗತಿಯವರೆಗೆ ಇದೆ. ರಾಜ್ಯ ಪಠ್ಯಕ್ರಮದ ವ್ಯವಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರತ್ಯೇಕ ಅಸ್ತಿತ್ವವಿದೆ. ವಸತಿ ಶಾಲೆಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಅಸ್ತಿತ್ವಕ್ಕೆ ಬಂದ ನಂತರ ಸಿಬಿಎಸ್ಇ, ಐಸಿಎಸ್ಇ ಮಾದರಿಯಲ್ಲಿ ಒಂದೇ ಕ್ಯಾಂಪಸ್ನಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ನೆಲೆಗೊಳ್ಳುತ್ತಿವೆ. ಕೆಪಿಎಸ್ಗಳು ಪೂರ್ವ ಪ್ರಾಥಮಿಕ ಹಂತದಿಂದ 11 ಮತ್ತು 12ನೇ ತರಗತಿಯವರೆಗೆ ವ್ಯಾಪ್ತಿ ವಿಸ್ತರಿಸಿಕೊಂಡಿವೆ.

ಶಾಲಾ ಶಿಕ್ಷಣ ಇಲಾಖೆಯ ಗುರಿಯಂತೆ 2026–27ರ ವೇಳೆಗೆ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಕೆಪಿಎಸ್ ಒಳಗೆ ಬರಲಿದ್ದಾರೆ. ಹಾಗಾಗಿ, ಪದವಿಪೂರ್ವ ಕಾಲೇಜುಗಳಿಗೆ ನೇಮಕವಾಗುವ ಉಪನ್ಯಾಸಕರಿಗೆ 9 ಮತ್ತು 10ನೇ ತರಗತಿಗೆ ಬೋಧಿಸುವುದನ್ನು ಕಡ್ಡಾಯ ಮಾಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. 2022ರಲ್ಲೇ ಸಿದ್ಧಪಡಿಸಿದ್ದ ಸೂತ್ರದಂತೆ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಹೊಸ ನಿಯಮದ ನಂತರವೇ 881 ಉಪನ್ಯಾಸಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಪ್ರೌಢಶಾಲಾ ತರಗತಿಗಳ ಬೋಧನೆಗೆ ಅವಕಾಶ ನೀಡುವ ತಿದ್ದುಪಡಿ ಮಾಡುವ ಶಿಕ್ಷಣ ಇಲಾಖೆಯ ಪ್ರಸ್ತಾವವು ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ.
– ನಿಂಗೇಗೌಡ ಎ.ಎಚ್, ಅಧ್ಯಕ್ಷ, ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ಪಿಯು ಸ್ವಾಯತ್ತತೆಗೆ ಧಕ್ಕೆ: ಉಪನ್ಯಾಸಕರ ಸಂಘ

‘ಪದವಿಪೂರ್ವ ಉಪನ್ಯಾಸಕರಿಗೆ 9 ಮತ್ತು 10ನೇ ತರಗತಿಗಳ ಬೋಧನೆಗೆ ಕಳುಹಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವ ಶೈಕ್ಷಣಿಕ ಶಿಸ್ತು, ಶೈಕ್ಷಣಿಕ ಶ್ರೇಣಿಗಳ ವೈಜ್ಞಾನಿಕ ಗಡಿ, ಆಡಳಿತಾತ್ಮಕ ಹಕ್ಕುಗಳು ಹಾಗೂ ಇಲಾಖೆಯ ಸ್ವಾಯತ್ತತೆಗೆ ಧಕ್ಕೆ ತರುತ್ತವೆ’ ಎಂದು ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹೇಳಿದೆ.

‘ಗ್ರೂಪ್–ಬಿ ವೃಂದದ ಉಪನ್ಯಾಸಕರನ್ನು ಗ್ರೂಪ್–ಸಿ ದರ್ಜೆಗೆ ಇಳಿಸುವುದು ಸರ್ಕಾರದ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಅವರ ವೃತ್ತಿ ಗೌರವಕ್ಕೂ ಧಕ್ಕೆಯಾಗುತ್ತದೆ. ಪದವಿಪೂರ್ವ ಶಿಕ್ಷಣ ಶಾಲಾ ಹಂತದ ವಿಸ್ತರಣೆಯಲ್ಲ, ಅದು ಉನ್ನತ ಶಿಕ್ಷಣದ ಸಿದ್ಧತೆಯ ಮೂಲ. ತಿದ್ದುಪಡಿಯ ಪ್ರಸ್ತಾವವು ಹೆಚ್ಚುವರಿ ಬೋಧನಾ ಹೊರೆ, ಉಪನ್ಯಾಸಕರ ಕಾರ್ಯನಿಷ್ಠೆಗೆ ಅಡ್ಡಿಯಾಗುತ್ತದೆ. ಹಾಗಾಗಿ, ಪ್ರಸ್ತಾವ ಕೈಬಿಡುವಂತೆ ಶಾಲಾ ಶಿಕ್ಷಣ ಸಚಿವ ಹಾಗೂ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್.

ಅಂಕಿ–ಅಂಶ

1,319: ಸರ್ಕಾರಿ ಪಿಯು ಕಾಲೇಜುಗಳು

12,917: ಮಂಜೂರಾದ ಬೋಧಕ ಹುದ್ದೆಗಳು

8,156: ಕಾಯಂ ಉಪನ್ಯಾಸಕರು

4,761: ಖಾಲಿ ಹುದ್ದೆಗಳು

881: ಪ್ರಸ್ತುತ ಭರ್ತಿ ಮಾಡಲಿರುವ ಹುದ್ದೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.