ಮಂಡ್ಯ: ಆಂಧ್ರಪ್ರದೇಶದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ನಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ನನ್ನ ಪತ್ನಿ ಅನಿತಾ ತೆಲುಗು ಮೂಲದವರು’ ಎಂಬ ಹೇಳಿಕೆ ನೀಡಿರುವವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೆಡಿಎಸ್ ಮುಖಂಡರು ಅಂಬರೀಷ್ ಪತ್ನಿ ಸುಮಲತಾ ಅವರ ಮೂಲ ಪ್ರಶ್ನೆ ಮಾಡಿರುವ ಸಂದರ್ಭದಲ್ಲಿ ಈ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರ ಅಭಿನಯದ ಮೊದಲ ಚಿತ್ರ‘ಜಾಗ್ವಾರ್’(ತೆಲುಗು ಅವತರಣಿಕೆ) ಬಿಡುಗಡೆ ವೇಳೆ ಅವರು ಸಂದರ್ಶನ ನೀಡಿದ್ದಾರೆ.

ಇದನ್ನೂ ಓದಿ:ಮಂಡ್ಯದ ಮನೆಮಗಳು ಯಾರು?: ಸುಮಲತಾರನ್ನು ಮತ್ತೆ ಕೆಣಕಿದ ಜೆಡಿಎಸ್

ತೆಲುಗು ಭಾಷೆಯ ಪರಿಚಯದ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ ಅವರು ತನ್ನ ಪತ್ನಿ ಅನಿತಾ ತೆಲುಗು ಮೂಲದವರಾಗಿದ್ದು ಭಾಷೆಯ ಪರಿಚಯವಿದೆ ಎಂದು ತಿಳಿಸಿದ್ದಾರೆ. ಸಂದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು ಪರ–ವಿರೋಧ ಚರ್ಚೆಗೆ ಕಾರಣವಾಗಿದೆ. ಸುಮಲತಾ ಅವರನ್ನು ಮಂಡ್ಯ ಗೌಡ್ತಿ ಅಲ್ಲ ಎನ್ನುವ ಜೆಡಿಎಸ್ ಮುಖಂಡರು ಅನಿತಾ ಅವರನ್ನು ಮಂಡ್ಯ ಗೌಡ್ತಿ ಎನ್ನುವರೇ ಎಂದು ಅಂಬರೀಷ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರದ ಗೌಡ್ತಿ: ಕೆ.ಟಿ.ಶ್ರೀಕಂಠೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.