‘ಬಿಜೆಪಿಯವರಿಂದ ಸಮ್ಮತಿ’
‘ಸಮಿತಿಯಲ್ಲಿರುವ ಬಿಜೆಪಿ ಸದಸ್ಯರೂ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎಲ್ಲರೂ ವರದಿಗೆ ಸಹಿ ಮಾಡಿದ್ದಾರೆ. ಈ ಹಿಂದೆ ಮಂಡಿಸಿದ್ದ ಮಸೂದೆಯಲ್ಲಿ ಪಾಲಿಕೆ ವ್ಯಾಪ್ತಿಯ ಆದಾಯವು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಬರುವ ಅಂಶ ಇತ್ತು. ಅದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯಾ ಪಾಲಿಕೆಗೆ ನೇರವಾಗಿ ಆದಾಯ ಸಂದಾಯ ಆಗಬೇಕು ಎಂಬ ಬಿಜೆಪಿಯವರ ಸಲಹೆಯನ್ನು ಒಪ್ಪಿ ವರದಿಯಲ್ಲಿ ಶಿಫಾರಸು ಮಾಡಿದ್ದೇವೆ’ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು. ‘ಹೊಸ ಪಾಲಿಕೆಗಳಿಗೆ ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ... ಹೀಗೆ ಹೆಸರು ಇರಬೇಕು. ಆದಾಯ ಸಂಗ್ರಹದ ಮಾನದಂಡದ ಆಧಾರದಲ್ಲಿ ಪಾಲಿಕೆಗಳನ್ನು ರಚನೆ ಮಾಡಬೇಕು. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಪಾಲಿಕೆಗೆ ಸೇರಿಸಬಹುದು ಎಂದೂ ಸಲಹೆ ನೀಡಿದ್ದೇವೆ’ ಎಂದರು.