ಬೆಂಗಳೂರು: ಬೆಂಗಳೂರು ಆಸುಪಾಸು ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಗುರುತಿಸಿರುವ ಮೂರು ಸ್ಥಳಗಳಲ್ಲೂ ವಿಮಾನ ಸಂಚಾರಕ್ಕೆ ಅಗತ್ಯವಾದ ಮಾರ್ಗಗಳ ಲಭ್ಯತೆಯೇ ದೊಡ್ಡ ಸವಾಲಾಗಿದೆ.

ಎರಡನೇ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆಗಳ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಿ, ಉದ್ದೇಶಿತ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತ್ತು. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವಿಮಾನ ಚಲಿಸುವ ವಾಯು ಮಾರ್ಗಗಳ ಕುರಿತು ವರದಿ ಪ್ರಮುಖವಾಗಿ ಉಲ್ಲೇಖಿಸಿದೆ. ರಾಜ್ಯ ಸರ್ಕಾರ ಸೂಚಿಸಿರುವ ಕನಕಪುರ ರಸ್ತೆಯ ಚೂಡಹಳ್ಳಿ– ಸೋಮನಹಳ್ಳಿ ಸುತ್ತಲಿನ ಹತ್ತಿರದ 4,800 ಎಕರೆ ಹಾಗೂ ಕರಿಯಾಳ ಕರೆನಹಳ್ಳಿ 5,000 ಎಕರೆ ಪ್ರದೇಶಗಳು, ನೆಲಮಂಗಲ– ಕುಣಿಗಲ್ ರಸ್ತೆಯ ಸೋಲದೇವನಹಳ್ಳಿ ಟೋಲ್ ಸಮೀಪದ 5,200 ಎಕರೆ ಪ್ರದೇಶಗಳಲ್ಲಿ ವಿಮಾನ ಸಂಚಾರಕ್ಕೆ ಅಗತ್ಯವಾದ ವಾಯು ಮಾರ್ಗಗಳು ಸೀಮಿತವಾಗಿವೆ. ಇದು ವಿಮಾನಗಳ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಹೇಳಿದೆ.

ಬೆಂಗಳೂರು ಸುತ್ತಮುತ್ತ ಈಗಾಗಲೇ ಹಲವು ಸಂಸ್ಥೆಗಳು ತಮ್ಮ ವಾಯು ಮಾರ್ಗಗಳ ಮೇಲೆ ಹಕ್ಕು ಸ್ಥಾಪಿಸಿವೆ. ನಗರದ ಸುಮಾರು ಅರ್ಧದಷ್ಟು ಮಾರ್ಗಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವ್ಯಾಪ್ತಿಯಲ್ಲಿದೆ. ಈ ಮಾರ್ಗಗಳ ಪ್ರದೇಶ ತಮಿಳುನಾಡಿನ ಕೊಯಂಬತ್ತೂರುವರೆಗೂ ವಿಸ್ತರಿಸಿದೆ. ಉತ್ತರ ಭಾಗದಲ್ಲಿ ಯಲಹಂಕ ವಾಯುಪಡೆಯ ವ್ಯಾಪ್ತಿ ಇದೆ. ಅದು ಹಾಸನದವರೆಗೂ ವಿಸ್ತರಿಸಿದೆ. ಹಾಗಾಗಿ, ಎರಡನೇ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಾಯು ಮಾರ್ಗ ಮೀಸಲಿಡುವುದು ಅಗತ್ಯವಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕನಕಪುರ ಭಾಗದಲ್ಲಿ ಗುರುತಿಸಿರುವ ಸ್ಥಳಗಳಲ್ಲಿ ಉಪಕರಣ ಹಾರಾಟದ ಕಾರ್ಯವಿಧಾನಗಳು (ಐಎಫ್ಪಿ) ಎಚ್ಎಎಲ್ ವಿಮಾನನಿಲ್ದಾಣ ಮತ್ತು ಹೊಸೂರಿನ ವಿಮಾನನಿಲ್ದಾಣದ ಕಾರ್ಯ ವಿಧಾನಗಳ ಮೇಲೆ ಅವಲಂಬಿತವಾಗಿರುತ್ತವೆ. ನೆಲಮಂಗಲ ಭಾಗದ ಸ್ಥಳವು ಎಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ಮೇಲೆ ಅವಲಂಬಿತವಾಗಿದೆ. ನೆಲಮಂಗಲ ವಿಮಾನನಿಲ್ದಾಣದ ಕಾರ್ಯಾಚರಣೆಗಳು ಈ ಮೂರು ವಿಮಾನ ನಿಲ್ದಾಣಗಳ ವಿಮಾನ ಸಂಚಾರಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಮೂರು ಸ್ಥಳಗಳಲ್ಲಿಯೂ ಕಠಿಣ ಹಾಗೂ ಮೃದು ಬಂಡೆಯ ಪ್ರದೇಶಗಳಿವೆ. ಕಾಮಗಾರಿ ಕೈಗೊಳ್ಳುವಾಗ ತಾಂತ್ರಿಕ ಸವಾಲುಗಳು ಎದುರಾಗಬಹುದು. ಕನಕಪುರ ಪ್ರದೇಶಗಳಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗುಡ್ಡಗಳು ಇವೆ. ನೆಲಮಂಗಲ ಪ್ರದೇಶದಲ್ಲಿ ಈ ಗುಡ್ಡಗಳು ಈಶಾನ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಇವೆ. ಇವು ವಿಮಾನ ಸಂಚಾರದ ಭದ್ರತೆಗೆ ಅಪಾಯವಾಗುತ್ತವೆಯೇ ಎಂಬುದನ್ನು ವಿಶ್ಲೇಷಿಸಬೇಕು. ಅಗತ್ಯವಿದ್ದರೆ ಗುಡ್ಡಗಳನ್ನು ಸಮತಟ್ಟು ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.