ಸರ್ಕಾರವು ಮಕ್ಕಳಲ್ಲಿನ ಪೌಷ್ಟಿಕತೆಯನ್ನು ಸುಧಾರಿಸಲು ಹಲವು ಆಯಾಮಗಳನ್ನು ಅನುಸರಿಸುತ್ತಿದೆ. ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಪೂರೈಕೆ ಮಾಡುತ್ತಿದ್ದರೂ ಕೆಲವು ಕಡೆಗಳಲ್ಲಿ ಶಾಲಾ ಮಕ್ಕಳು ಪೌಷ್ಟಿಕತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸೂಕ್ಷ್ಮ ಸಮಸ್ಯೆ ಗಮನಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಹಲವು ಉಪಕ್ರಮಗಳಿಂದ ಸುಧಾರಿತ ಬದಲಾವಣೆ ತಂದು ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ.

ಬೆಂಗಳೂರಿನ ಹಳೆಯ ವಾಸಸ್ಥಾನಗಳಲ್ಲಿ ಬೆಳ್ಳಂದೂರು ಒಂದು. ಬೆಳ್ಳಂದೂರಿನ ಸರ್ಕಾರಿ ನೋಡಲ್ ಶಾಲೆಯು 90 ವರ್ಷದ ಹಳೆಯದ್ದಾಗಿದೆ. ಇದು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು, 400 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಶಾಲೆಗೆ ಮಧ್ಯಾಹ್ನದ ಬಿಸಿಯೂಟದ ಪೂರೈಕೆಯನ್ನು ಅಕ್ಷಯ ಪಾತ್ರೆ ಫೌಂಡೇಷನ್ ಒದಗಿಸುತ್ತದೆ. ಇಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ಹಿಂದುಳಿದ ಸಮುದಾಯ ಹಾಗೂ ವಲಸೆ ಕಾರ್ಮಿಕರ ಮಕ್ಕಳಾಗಿದ್ದಾರೆ.

ಬೆಳ್ಳಂದೂರು ನಿವಾಸಿ ಇನ್ವೇಂಚರ್ ಅಕಾಡೆಮಿಯ 11ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಶ್ರೀಕಾಂತ್, ಬೆಳ್ಳಂದೂರು ಶಾಲೆಯಲ್ಲಿದ್ದ ಎರಡು ಪ್ರಮುಖ ಸಮಸ್ಯೆಗಳನ್ನು ತಿಳಿದುಕೊಂಡ ಶಾಲೆಗೆ ಮಕ್ಕಳು ಬೆಳಿಗ್ಗೆ ಹಸಿವಿನಿಂದ ಬರುತ್ತಿದ್ದು, ಬೆಳಗಿನ ಉಪಹಾರದ ಕೊರತೆಯು ಅವರ ಕಲಿಕೆಯ ಮೇಲೆ ಪರಿಣಾಮ ಬೀರುವುದನ್ನು ಅರಿತರು. ಇನ್ನು 400 ವಿದ್ಯಾರ್ಥಿಗಳಿರುವ ಶಾಲೆಗೆ ಮೂರು ಶೌಚಾಲಯಗಳಿವೆ. ಇವುಗಳು ಮಕ್ಕಳು ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ.

ಆರಂಭದಲ್ಲಿ ಸಾಕ್ಷಿ ಸ್ಥಳೀಯ ಶಾಲೆಗಳಿಗೆ ಪುಸ್ತಕ ಹಾಗೂ ಸ್ಟೇಷನರಿಗಳನ್ನು ವಿತರಿಸುವ ‘ಜಾಯ್ ಫಾರ್ ಗೀವಿಂಗ್‘ ಎನ್ನುವ ಸಣ್ಣ ಯೋಜನೆಗಳನ್ನು ಹಾಕಿಕೊಂಡಿದ್ದರು. ಇದರೊಂದಿಗೆ ಶಾಲಾ ಸಮವಸ್ತ್ರಗಳ ಹೊಲಿಗೆಗೆ ಅಮೆಜಾನ್ ಡಿಸ್ಟ್ರಿಬ್ಯುಟರ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ರಿಚಾ ಅಗರ್ವಾಲ್ ಅವರೊಂದಿಗೆ ಕೆಲಸ ಮಾಡಿದರು.

ಪೋಷಣೆ ಹಾಗೂ ರಸಾಯನವಿಜ್ಞಾನದ ಬಗ್ಗೆ ಅಧ್ಯಯನ ಮಾಡಿ, ಸಣ್ಣ ಬದಲಾವಣೆಯನ್ನು ತರಲು ನಿರ್ಧರಿಸಿದ ಸಾಕ್ಷಿ, ‘ಹಂಗ್ರಿ ನೋ ಮೋರ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಪೌಷ್ಟಿಕಆಹಾರ ತಜ್ಞರೊಂದಿಗೆ ಮಾತನಾಡಿ, ಪ್ರತಿದಿನ ಮಕ್ಕಳಿಗೆ ಸ್ಥಳೀಯ ಮಾರುಕಟ್ಟೆಯಿಂದ 400 ಬಾಳೆಹಣ್ಣುಗಳನ್ನು ನೀಡಲು ಹಣವನ್ನು ಸಂಗ್ರಹಿಸಿದರು. ಈ ಉಪಕ್ರಮವು ಮಕ್ಕಳಲ್ಲಿನ ಏಕಾಗ್ರತೆಯನ್ನು ಸುಧಾರಿಸಿ, ಶೀಘ್ರ ಫಲಿತಾಂಶಗಳನ್ನು ನೀಡಿತು.

ನಂತರ ಶಾಲಾ ಶೌಚಾಲಯಗಳ ಮೇಲೆ ಗಮನ ಹರಿಸಿದ ಸಾಕ್ಷಿ, ಅಮೆಜಾನ್ ಡಿಸ್ಟ್ರಿಬ್ಯುಟರ್ಸ್ ಹಾಗೂ ಸಿಎಸ್ಆರ್ ನಿಧಿಗಳನ್ನು ಬಳಸಿಕೊಂಡು, ರಿಚಾ ಅಗರ್ವಾಲ್ ಅವರ ನೆರವಿನೊಂದಿಗೆ ಐದು ಹೊಸ ಶೌಚಾಲಯಗಳನ್ನು ನಿರ್ಮಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ತಿಮ್ಮೇಗೌಡ ಮಾತನಾಡಿ, ಸಾಕ್ಷಿ ಅವರು ಶಾಲೆಯ ಅಗತ್ಯಗಳನ್ನು ಮನಗಂಡು, ಸಹಾಯಕ್ಕೆ ಕೈ ಜೋಡಿಸಿದರು. ಇದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು, ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತೊಡೆದುಹಾಕಲು ಪೌಷ್ಟಿಕಾಂಶ ಆಹಾರ ಪೂರೈಕೆ ಹಾಗೂ ಸ್ವಚ್ಛತೆಯ ಕಡೆಗೆ ಗಮನ ಕೊಡುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುವುದು ಸಾಕ್ಷಿ ಅವರ ಮುಂದಿನ ಆಲೋಚನೆ. ಜತೆಗೆ ಆಹಾರ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ರಸಾಯನವಿಜ್ಞಾನದಲ್ಲಿ ಪದವಿ ಪಡೆದು, ಅದರಲ್ಲಿಯೇ ಅಧ್ಯಯನ ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.