ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಪೀಣ್ಯದ ಶಾಲೆಯಲ್ಲಿ ಭಾರತಿದರ್ಶ್ ಫೌಂಡೇಷನ್ ವತಿಯಿಂದ ಆಲದ ಸಸಿ ನೆಡುವಿಕೆ ಮತ್ತು ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.

ಎಲ್.ಬಿ.ಎಸ್. ಆಟೊಮೇಷನ್ ಸಿಸ್ಟಮ್ ಮಾಲೀಕ ಎನ್.ಕೆ. ಬಸವರಾಜ, ಪಿ.ಎಂ. ಲೀಲಾವತಿ, ಭೂಷಣ್, ಮೋನಿಕಾ ಪ್ರಮೋದ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರ ಬದುಕಿನ ಸಾಧನೆಯನ್ನು ನೆನಪಿಸಿಕೊಂಡು, ಆಲದ ಸಸಿಗೆ ನೀರು ಹಾಕಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. 500ಕ್ಕೂ ಹೆಚ್ಚು ಮಕ್ಕಳಿಗೆ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.

‘ಸಾಲುಮರದ ತಿಮ್ಮಕ್ಕ ಅವರ ನೆನಪಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರ ಆಲದ ಸಸಿಗಳನ್ನು ನೆಡುವ ಗುರಿಯಿದೆ’ ಎಂದೂ ಭಾರತಿದರ್ಶ್ ಫೌಂಡೇಷನ್ನ ಶೈಲೇಂದ್ರ ಪಾಟೀಲ್ ಹೇಳಿದರು.

‘ಉಚಿತವಾಗಿ ಶಸ್ತ್ರಚಿಕಿತ್ಸೆ, ವೃದ್ಧಾಶ್ರಮ ಸೌಲಭ್ಯ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಬಡ ರೋಗಿಗಳಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರು, ಪ್ಲಾಸ್ಟಿಕ್ ಮುಕ್ತ ಬೆಂಗಳೂರು, ವಿಕಲಾಂಗ ಮಕ್ಕಳ ಸಮಸ್ಯೆ, ಉಚಿತ ಕಾನೂನು ಸಲಹೆಗಾಗಿ ನಮ್ಮ ಜಾಲ ತಾಣವನ್ನು contact@bharathidarshfoundation.com ಸಂಪರ್ಕಿಸಬಹುದು’ ಎಂದೂ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್, ನರಸಮ್ಮ, ಎಂ. ಮುನಿರಾಜು ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.