ಬೆಂಗಳೂರು: ಜಪಾನ್ನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ಬೆಂಗಳೂರಿನಿಂದ ನೇರ ವಿಮಾನ ಸೇವೆ ಒದಗಿಸುವ ಬಗ್ಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು, ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ನಕಾನೆ ಸುಟೋಮು ಜತೆಗೆ ಮಾತುಕತೆ ನಡೆಸಿದರು.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಬಿ.ಪಾಟೀಲ ಅವರು, ‘ಬೆಂಗಳೂರಿನಿಂದ ಟೋಕಿಯೋಗೆ ಮಾತ್ರ ನೇರ ವಿಮಾನ ಸೇವೆ ಇದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ, ಜಪಾನ್ನ ಉದ್ದಿಮೆಗಳ ಜತೆಗೆ ₹7,500 ಕೋಟಿಯಷ್ಟು ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಉದ್ದಿಮೆ ಸಂಬಂಧ ವೃದ್ಧಿಗೆ ಒಸಾಕಾ ಮತ್ತು ನಗಾಯಾ ನಗರಗಳಿಗೆ ನೇರ ವಿಮಾನ ಸೇವೆ ಒದಗಿಸುವ ಅಗತ್ಯವಿದೆ’ ಎಂದರು.

‘ಭಾರತದಲ್ಲಿ ಜಪಾನ್ನ 1,400 ಕಂಪನಿಗಳಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳು ತಯಾರಿಕೆ ವಲಯವೊಂದರಲ್ಲೇ ಸಕ್ರಿಯವಾಗಿವೆ. ಭಾರತದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಜಪಾನ್ ಐದನೆಯ ಸ್ಥಾನದಲ್ಲಿದೆ. ಈ ಎಲ್ಲ ನಿಟ್ಟಿನಲ್ಲೂ ನೇರ ವಿಮಾನ ಸೇವೆಯ ಅಗತ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಪಾನ್ ಜತೆಗೆ ಹೂಡಿಕೆ, ಸಾಂಸ್ಕೃತಿಕ ವಿನಿಮಯ, ಶೈಕ್ಷಣಿಕ ಸಹಕಾರ ಹಾಗೂ ಭಾಷಾ ಕಲಿಕೆಯ ಉಪಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಸಲುವಾಗಿ ಸೆಪ್ಟೆಂಬರ್ 6ರಿಂದ 10 ದಿನ ಜಪಾನ್ ಪ್ರವಾಸ ಕೈಗೊಳ್ಳಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.