ರಾಮದುರ್ಗ: ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವಾಹನ ತಡೆದು ₹ 20 ಸಾವಿರದ ಗಾಂಜಾ ಮತ್ತು ₹ 50 ಸಾವಿರ ಮೌಲ್ಯದ ದ್ವಿಚಕ್ರವಾಹನವನ್ನು ಅಬಕಾರಿ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ಬಳಿ ಬದಾಮಿ ರಸ್ತೆಯಲ್ಲಿ ಬೈಕ್ನಲ್ಲಿ ಗಾಂಜಾ ತೆಗೆದುಕೊಂಡು ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಅಧಿಕಾರಿಗಳು ನಡೆಸಿದರು. ಆರೋಪಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.

ಬೈಕ್ನಲ್ಲಿದ್ದ 798 ಗ್ರಾಂ ಗಾಂಜಾ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯ ಅಬಕಾರಿ ಆಯುಕ್ತ ಡಾ. ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಚ್.ಎಫ್.ಚಲವಾದಿ, ಅಬಕಾರಿ ಜಂಟಿ ಆಯುಕ್ತೆ ವನಜಾಕ್ಷಿ ಅವರ ಮಾರ್ಗದರ್ಶನದಲ್ಲಿ ರಾಮದುರ್ಗದ ಅಬಕಾರಿ ಉಪಅಧೀಕ್ಷಕ ಶಂಕರಗೌಡ ಪಾಟೀಲ ಅವರು ಬಸವರಾಜ ಕಿತ್ತೂರ ನೇತೃತ್ವದ ತಂಡ ದಾಳಿ ನಡೆಸಿದೆ. ಬಸವರಾಜ ಕಿತ್ತೂರ ನೇತೃತ್ವದ ತಂಡದಲ್ಲಿ ಅಬಕಾರಿ ಸಿಬ್ಬಂದಿ ಮಂಜುನಾಥ ಶೀಗಿಹಳ್ಳಿ, ವಾಹನ ಚಾಳಕ ಶಾನೂರ ಜಮಾದಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.