ಹಾಸನ: ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಅವರ ಬೆಂಬಲಿಗರು ಒಪ್ಪಿಗೆ ಸೂಚಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಅವರು, ‘ನಾನು ರಾಜಕೀಯದಲ್ಲಿ ಉಳಿಯಬೇಕೋ, ಬೇಡವೋ? ಯಾವ ಪಕ್ಷದಿಂದ ಸ್ಪರ್ಧಿಸಲಿ? ಪಕ್ಷೇತರನಾಗಿ ಸ್ಪರ್ಧಿಸಲೇ? ಎಂದು ಕೇಳಿದರು.
‘ಮಾರ್ಚ್ 5 ರಂದು ಸಿದ್ದರಾಮಯ್ಯ ತಾಲ್ಲೂಕಿಗೆ ಬರಲಿದ್ದಾರೆ. ಅದಕ್ಕೂ ಮೊದಲು ಸ್ಪಷ್ಟವಾಗಿ ತೀರ್ಮಾನಿಸಬೇಕು. ನೀವು ಹೇಳಿದಂತೆ ನಾನು ಕೇಳುವೆ’ ಎಂದರು. ಅದಕ್ಕೆ ಬೆಂಬಲಿಗರು ಮೊಬೈಲ್ ಟಾರ್ಚ್ ಬೆಳಗಿಸಿ ‘ಕಾಂಗ್ರೆಸ್’ ಎಂದು ಕೂಗಿದರು.
‘ಚುನಾವಣೆ ಘೋಷಣೆವರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ’ ಎಂದು ಅವರು ಗುರುವಾರ ತಿಳಿಸಿದರು.