ಬೆಂಗಳೂರು: ಉಭಯ ಸದನಗಳು ಗದ್ದಲದಲ್ಲಿ ಮುಳುಗಿ ಹೋಗಿದ್ದ ಸಂದರ್ಭದಲ್ಲೇ, ಸಚಿವರು, ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ದುಪ್ಪಟ್ಟು ಏರಿಕೆ ಮಾಡುವ ಎರಡು ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು.

ಹನಿಟ್ರ್ಯಾಪ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ‘ಸದನ ನಿಮ್ಮಪ್ಪನದ್ದಲ್ಲ’ ಎಂದು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ ಎಂದು ಆಪಾದಿಸಿ ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿದ್ದರು. ಈ ಸಮಯದಲ್ಲಿ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ‘ ಮತ್ತು ‘ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ’ಗಳನ್ನು ಯಾವುದೇ ಚರ್ಚೆ ಇಲ್ಲದೇ ಅನುಮೋದನೆ ಪಡೆಯಲಾಯಿತು.

ಮುಖ್ಯಮಂತ್ರಿಯವರ ವೇತನ ತಿಂಗಳಿಗೆ ₹75 ಸಾವಿರದಿಂದ ₹1.50 ಲಕ್ಷ, ವಿಧಾನಸಭಾಧ್ಯಕ್ಷರು ಮತ್ತು ಸಚಿವರ ವೇತನ ₹60 ಸಾವಿರದಿಂದ ₹1.25 ಲಕ್ಷ, ವಿಧಾನ ಪರಿಷತ್ ಸಭಾಪತಿ ವೇತನ ₹ 75 ಸಾವಿರದಿಂದ ₹ 1.25 ಲಕ್ಷ, ರಾಜ್ಯ ಸಚಿವರ ವೇತನ₹ 50 ಸಾವಿರದಿಂದ ₹ 75 ಸಾವಿರ ಹಾಗೂ ಶಾಸಕರ ವೇತನ ₹ 40 ಸಾವಿರದಿಂದ ₹ 80 ಸಾವಿರಕ್ಕೆ ಏರಿಕೆಯಾಗಲಿದೆ.

ಭತ್ಯೆ ಹೆಚ್ಚಳ

l→ಮುಖ್ಯಮಂತ್ರಿ,ಸಚಿವರು: ₹4.50 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ (ಆತಿಥ್ಯ ಭತ್ಯೆ)

l→ಸಚಿವರು: ₹1.20 ಲಕ್ಷದಿಂದ ₹2.50 ಲಕ್ಷಕ್ಕೆ ಏರಿಕೆ (ಮನೆ ಬಾಡಿಗೆ)

l→ರಾಜ್ಯಸಚಿವರು: ₹1.20 ಲಕ್ಷದಿಂದ ₹2 ಲಕ್ಷಕ್ಕೆ ಏರಿಕೆ (ಮನೆ ಬಾಡಿಗೆ)

ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ ₹ 50 ಕೋಟಿ, ಮುಖ್ಯಮಂತ್ರಿ, ಸಚಿವರುಗಳ ವೇತನ ಭತ್ಯೆ ಹೆಚ್ಚಳದಿಂದ ₹ 10 ಕೋಟಿ ಸೇರಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹ 62 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.