ದೇವನಹಳ್ಳಿ ಬೆಂಗಳೂರಿಗೆ ಹತ್ತಿರವಿದೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣ ಇದ್ದು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪ್ರಾಶಸ್ತ್ರ್ಯ ಸ್ಥಳ. ಆದರೆ ಜಮೀನಿನ ಮೇಲೆ ಅವಲಂಬಿತವಾದ ರೈತರ ಬದುಕೂ ಅಷ್ಟೆ ಮುಖ್ಯ
ಸಿದ್ದರಾಮಯ್ಯ ಮುಖ್ಯಮಂತ್ರಿ
ಸ್ವಾಧೀನ ಕೈಬಿಟ್ಟರೆ ಉದ್ದೇಶಿತ ಯೋಜನೆಗೆ ಹಿನ್ನಡೆಯಾಗುವುದು ಸಹಜ. ಆದರೂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ರೈತರಿಗೆ ನ್ಯಾಯ ಒದಗಿಸಿದ್ದಾರೆ
ಪ್ರಕಾಶ್ ರಾಜ್ ನಟ
ರೈತರನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಗೆ ಯಾವುದೇ ಸರ್ಕಾರ ಆದ್ಯತೆ ನೀಡಬೇಕು. ಒತ್ತಾಯದ ಭೂ ಸ್ವಾಧೀನಕ್ಕೆ ಎಂದಿಗೂ ಅವಕಾಶ ಇರಬಾರದು
ಚುಕ್ಕಿ ನಂಜುಂಡಸ್ವಾಮಿ ರೈತ ನಾಯಕಿ
ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಬಯಸಿದ್ದ ರೈತರಿಗೂ ನಿರಾಸೆಯಾಗದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಬಹಳಷ್ಟು ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ
ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಸಂಘಟಿತ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ರಾಜ್ಯದ ಹಲವು ಸಂಘಟನೆಗಳು ಪ್ರಗತಿಪರರು ಒಂದಾಗಿ ಸ್ಥಳೀಯ ರೈತರ ಜತೆ ನಡೆಸಿದ ಸುದೀರ್ಘ ಹೋರಾಟ ಫಲಕೊಟ್ಟಿದೆ
ಬಡಗಲಪುರ ನಾಗೇಂದ್ರ ಮುಖಂಡ ಸಂಯುಕ್ತ ಹೋರಾಟ–ಕರ್ನಾಟಕ
ಐದೂವರೆ ಎಕರೆ ಜಮೀನೇ ನಮ್ಮ ಕುಟುಂಬಕ್ಕೆ ಆಧಾರ. ಭೂಸ್ವಾಧೀನ ಅಧಿಸೂಚನೆಯ ನಂತರ ಬೀದಿಗೆ ಬೀಳುವ ಭಯ ಆವರಿಸಿತ್ತು. ಮೂರು ವರ್ಷ ಸರಿಯಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಮನೆ ಸೇರಿರಲಿಲ್ಲ