ಲಂಡನ್: ವಿಶ್ವವಿದ್ಯಾಲಯಗಳ ಶಿಕ್ಷಣ ಹಾಗೂ ಸಂಶೋಧನಾ ಗುಣಮಟ್ಟ ಹೆಚ್ಚಿಸಲು ಬ್ರಿಟನ್ ಜತೆ ಸಹಯೋಗಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರ, ಮೊದಲ ಹಂತದಲ್ಲಿ ರಾಜ್ಯದ ಆರು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಅಧ್ಯಯನಕ್ಕೆ ಕಳುಹಿಸಿಕೊಡಲು ನಿರ್ಧರಿಸಿದೆ.

ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ತೀವ್ರ ಕುಸಿಯುತ್ತಿದ್ದು, ಕೆಲವು ಕೋರ್ಸ್ಗಳಿಗೆ ಬೇಡಿಕೆ ಇಲ್ಲದಂತೆ ಆಗಿದೆ. ಶತಮಾನ ಪೂರೈಸಿರುವ ಹಳೆಯ ವಿಶ್ವವಿದ್ಯಾಲಯಗಳೂ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ. ಇಂತಹ ಎಲ್ಲ ವಿಶ್ವವಿದ್ಯಾಲಯಗಳನ್ನು ಸಹಜ ಸ್ಥಿತಿಗೆ ತಂದು, ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಪೂರಕವಾಗಿ ಸಜ್ಜುಗೊಳಿಸಲು ಕೇಂಬ್ರಿಡ್ಜ್, ವೇಲ್ಸ್, ವೋಲ್ವರ್ ಹ್ಯಾಮ್ಟನ್ ಸೇರಿದಂತೆ ಬ್ರಿಟನ್ನ ಹಲವು ವಿಶ್ವವಿದ್ಯಾಲಯಗಳು ನೆರವು ನೀಡಲಿವೆ.

ಬ್ರಿಟನ್ ಪ್ರವಾಸದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಈ ಕುರಿತು ಇಲ್ಲಿನ ವಿಶ್ವವಿದ್ಯಾಲಯಗಳ ಜತೆ ಮಾತುಕತೆ ನಡೆಸಿದರು.

ಮೊದಲ ಹಂತದಲ್ಲಿ ಆರು ವಿಶ್ವವಿದ್ಯಾಲಯಗಳ ಕುಲಪತಿಗಳು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಂ.ಜಯಕರ್ ನೇತೃತ್ವದಲ್ಲಿ ಬ್ರಿಟನ್ಗೆ ಭೇಟಿ ನೀಡಿ, ಬೇಡಿಕೆ ಇರುವ ಕೋರ್ಸ್ಗಳು, ಕಲಿಕಾ ಪದ್ಧತಿ, ಪ್ರತಿ ಕೋರ್ಸ್ಗಳ ಅವಧಿ, ಉದ್ಯೋಗದ ಅವಕಾಶಗಳು, ಆಡಳಿತ ವ್ಯವಸ್ಥೆ, ಸಂಶೋಧನಾ ವಿಧಾನದ ಸ್ವರೂಪಗಳ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ. ನಂತರ ಕರ್ನಾಟಕದಲ್ಲೂ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಿದ್ದಾರೆ.

ಆರು ನಗರಗಳಲ್ಲಿ ಆರೋಗ್ಯ ಕೌಶಲ ಕೇಂದ್ರ

ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಯ ಮಾದರಿಯಲ್ಲೇ ರಾಜ್ಯದ ವೈದ್ಯಕೀಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದ ಪ್ರಕಾರ ಬ್ರಿಟನ್ ಸಹಯೋಗದಲ್ಲಿ ಮೊದಲ ಹಂತದಲ್ಲಿ ಕಲಬುರಗಿ ಗದಗ ಬೆಂಗಳೂರು ಮಂಗಳೂರು ದಾವಣಗೆರೆ ಮೈಸೂರು ನಗರಗಳಲ್ಲಿ ತಲಾ ಒಂದು ಆರೋಗ್ಯ ಕೌಶಲ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಜಿ. ಚಂದ್ರಶೇಖರ್ ಮತ್ತು ಹೋಲ್ವರ್ ಹ್ಯಾಮ್ಟನ್ ವಿಶ್ವವಿದ್ಯಾಲಯದ ಎನ್ ಎಚ್ ಎಸ್ ಟ್ರಸ್ಟ್ ನ ಸಿಇಒ ಕಾರ್ಡ್ವಿಕ್ ಜೋ ಸಹ ಕುಲಪತಿ ಪ್ರಶಾಂತ್ ಪಿಳ್ಳೈ ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ‘ಬ್ರಿಟನ್ನ ಆರೋಗ್ಯ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲ ಪ್ರಕಾರದ ರೋಗಗಳಿಗೂ ಸರ್ಕಾರವೇ ಉಚಿತ ಚಿಕಿತ್ಸೆ ನೀಡುತ್ತಿದೆ. ಇಲ್ಲಿನ ಗುಣಮಟ್ಟದ ಸೇವೆಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಇಲ್ಲಿನ ಆಯ್ದ ವೈದ್ಯರು ಆಡಳಿತಾಧಿಕಾರಿಗಳನ್ನು ಹಂತಹಂತವಾಗಿ ಬ್ರಿಟನ್ಗೆ ಕಳುಹಿಸಲಾಗುವುದು. ಅಲ್ಲಿನ ತಜ್ಞರನ್ನು ಕರ್ನಾಟಕಕ್ಕೆ ಕರೆಯಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಬ್ರಿಟನ್ ವಿಶ್ವವಿದ್ಯಾಲಯಗಳ ನಿರ್ವಹಣೆ ಗುಣಮಟ್ಟದ ಶಿಕ್ಷಣದ ಅಧ್ಯಯನಕ್ಕಾಗಿ ತೆರಳುವ ಕುಲಪತಿಗಳ ತಂಡ ಮೊದಲು ವೇಲ್ಸ್ ಗೆ ಭೇಟಿ ನೀಡಲಿದೆ.
ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.