ಬೆಂಗಳೂರು: ‘ಪಕ್ಷದ ಸಮಿತಿಯಿಂದ ನನ್ನನ್ನು ಕೈಬಿಡಲಾಗಿದೆ. ಯಾವ ಸಮಿತಿಯಲ್ಲೂ ನಾನಿಲ್ಲ. ಹೀಗಾಗಿ ನಾನು ಪಕ್ಷದ ಕಚೇರಿಗೆ ಹೋಗುವುದಿಲ್ಲ, ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತೇನೆ’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗುವ ಆಸೆ ನನಗೇನೂ ಇರಲಿಲ್ಲ. ಆಸೆ ತೋರಿಸಿ, ಏನನ್ನೂ ಹೇಳದೆ ನನ್ನ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರವಾಯಿತು’ ಎಂದರು.

‘ಯಾವ ಕಾರಣಕ್ಕಾಗಿ ನನ್ನ ಹೆಸರನ್ನು ಕೈಬಿಡಲಾಯಿತು ಎಂಬುದನ್ನು ಕುಮಾರಸ್ವಾಮಿ ಅವರು ಈವರೆಗೂ ತಿಳಿಸಿಲ್ಲ. ಅಂದಿನಿಂದ ನನ್ನ ಪಾಡಿಗೆ ನಾನು, ಅವರ ಪಾಡಿಗೆ ಅವರು ಇದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರು ಅವರಿಗೆ ಬೇಡವಾಗಿದೆ. ಬದಲಿಗೆ ಚಾಡಿ ಹೇಳುವವರು ಅವರಿಗೆ ಪ್ರಿಯವಾಗುತ್ತಾರೆ’ ಎಂದರು.

‘ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಪಾಂಡವಪುರದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ‘ನೀವೇ ಶಾಸಕಾಂಗ ಪಕ್ಷದ ನಾಯಕ’ ಎಂದು ಸೂಚ್ಯವಾಗಿ ಹೇಳಿದ್ದರು. ಎದುರಾಳಿ ಕಾಂಗ್ರೆಸ್ ಪಾಳಯದಲ್ಲೂ ಈ ಮಾತು ಚಾಲ್ತಿಯಲ್ಲಿತ್ತು’ ಎಂದು ವಿವರಿಸಿದರು.

‘ಡಿ.ಕೆ.ಶಿವಕುಮಾರ್ ಸಹ ಈ ವಿಷಯ ಪ್ರಸ್ತಾಪಿಸಿದ್ದರು. ಅಧಿಕೃತವಾಗಿ ಘೋಷಣೆ ಆಗದೆ ಹೇಗೆ ನಾಯಕನಾಗುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ನಿಖಿಲ್ ಅವರೇ ಸೂಚ್ಯವಾಗಿ ಹೇಳಿದ್ದರಿಂದ ಹೊಸ ಕಚೇರಿಯನ್ನೂ ಆರಂಭಿಸಿದ್ದೆ. ಆದರೆ, ಯಾವ ಕಾರಣವನ್ನೂ ನೀಡದೆ ಬೇರೆಯವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಿಸಿದರು. ಇದರಿಂದ ನನಗೆ ತುಂಬಾ ನೋವಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾನು ಕುಮಾರಸ್ವಾಮಿ ಅವರನ್ನೂ ಹೊಗಳಿದ್ದೇನೆ. ಸಿದ್ದರಾಮಯ್ಯ ಅವರನ್ನೂ ಹೊಗಳಿದ್ದೇನೆ. ತೆಗಳುವಾಗ ತೆಗಳಬೇಕು, ಹೊಗಳುವಾಗ ಹೊಗಳಬೇಕು. ಸಿದ್ದರಾಮಯ್ಯ ಅವರ ಜೊತೆ 25 ವರ್ಷ ಕೆಲಸ ಮಾಡಿದ್ದೆ. ಅವರ ವಿರುದ್ಧ ಹೋರಾಡುವ ಹೊಣೆಯನ್ನು ಪಕ್ಷ ನೀಡಿದಾಗ, ಹೋರಾಡಿದೆ. ಆಗಿನ ನನ್ನ ನಿಷ್ಠೆ ಪಕ್ಷದ ನಾಯಕರಿಗೆ ಕಾಣಲಿಲ್ಲವೇ’ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದರು.

ನಾನು ಜೆಡಿಎಸ್ನೊಂದಿಗೆ ಕೂಡಿಕೆ ಮಾಡಿಕೊಂಡವನಲ್ಲ ಪಕ್ಷವನ್ನು ಕಟ್ಟಿದವರಲ್ಲಿ ನಾನೂ ಒಬ್ಬ. ನಾನೇಕೆ ಪಕ್ಷ ಬಿಡಬೇಕು? ಪಕ್ಷದಲ್ಲೇ ಇರುತ್ತೇನೆ
-ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.